ಶನಿವಾರ, ಜೂಲೈ 11, 2020
25 °C

ಚಿರು ಅವರ‌ ಪ್ರೀತಿಯ ನಾಯಿಯ ಹೆಸರು 'ರೌಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಚಿರಂಜೀವಿ ಸರ್ಜಾ ಅವರಿಗೆ ನಾಯಿಗಳೆಂದರೆ ತುಂಬಾ ‌ಪ್ರೀತಿ. ದೇಸಿ ಹಾಗೂ ವಿದೇಶಿ ‌ತಳಿಗಳ‌ ನಾಯಿಗಳನ್ನು ಸಾಕುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ ಇತ್ತು. ಅವರ ಮೆಚ್ಚಿನ ನಾಯಿಗೆ 'ಭೀಮ' ಎಂದು‌ ಹೆಸರಿಟ್ಟಿದ್ದರು. ಅದು ಇತ್ತೀಚೆಗೆ ಮೃತಪಟ್ಟಿತ್ತು. ಆಗ ಚಿರು ದುಃಖದಲ್ಲಿ‌ ಮುಳುಗಿದ್ದರು.

ಇತ್ತೀಚೆಗೆ‌ ಮತ್ತೊಂದು‌ ನಾಯಿಯನ್ನು ತಂದು ಸಾಕಿದ್ದರು. ಅದಕ್ಕೆ ಅವರು‌ ಇಟ್ಟಿರುವ ಹೆಸರು 'ರೌಡಿ'. 

ಸ್ವಂತ‌‌ ಮನೆ ಕಟ್ಟಿಸುವ ಕನಸು ಕಂಡಿದ್ದರು ಚಿರು.‌ ಇದಕ್ಕಾಗಿ ಅವರು ಇತ್ತೀಚೆಗೆ ನಾಗರಭಾವಿಯಲ್ಲಿ‌ ನಿವೇಶನ‌ ಕೂಡ ಖರೀದಿಸಿದ್ದರಂತೆ.

ಅವರಿಗೆ ಕಳೆದ ಹನ್ನೊಂದು ವರ್ಷಗಳಿಂದ ಕಾರು ಚಾಲಕನಾಗಿ‌ ಕೆಲಸ ಮಾಡುತ್ತಿದ್ದ ರಾಜು ಅವರು ಚಿರಂಜೀವಿ ಸರ್ಜಾ ಅವರನ್ನು‌ ನೆನಪಿಸಿಕೊಳ್ಳುವುದು ಹೀಗೆ: 'ಅವರು‌‌ ನಮ್ಮಿಂದ‌ ದೂರವಾಗಿದ್ದಾರೆ ಎಂದು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ಪ್ರತಿದಿನ ಅವರು‌ ಮನೆಯಲ್ಲಿ ಊಟ ಮಾಡಲು ಹಿತ್ತಾಳೆ‌ ತಟ್ಟೆ ಮತ್ತು ಲೋಟವನ್ನು‌ ಬಳಸುತ್ತಿದ್ದರು. ಸಿನಿಮಾ‌ ಶೂಟಿಂಗ್ ಸೆಟ್‌ ನಲ್ಲಿಯೂ ಹಿತ್ತಾಳೆ‌ ತಟ್ಟೆ‌ ಮತ್ತು‌ ಲೋಟವನ್ನು ಬಳಸುತ್ತಿದ್ದರು'.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು