ಶುಕ್ರವಾರ, ಮಾರ್ಚ್ 24, 2023
30 °C

ನಟ ವಿಕ್ರಮ್‌ಗೆ ಹೃದಯಾಘಾತವಾಗಿಲ್ಲ, ಸಣ್ಣ ಪ್ರಮಾಣದ ಎದೆ ನೋವು: ಪುತ್ರ ಧ್ರುವ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳಿನ ಖ್ಯಾತ ನಟ ವಿಕ್ರಮ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು, ಅವರಿಗೆ ಹೃದಯಾಘಾತವಾಗಿಲ್ಲ ಎಂದು ಅವರ ಪುತ್ರ ಧ್ರುವ ಸ್ಪಷ್ಟಪಡಿಸಿದ್ದಾರೆ. 

ನಟ ವಿಕ್ರಮ್‌ ‘ಪೊನ್ನಿಯಿನ್ ಸೆಲ್ವನ್’ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲ ಸಮಯದ ಬಳಿಕ  ಅನಾರೋಗ್ಯದಿಂದ ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: ತಮಿಳು ನಟ ವಿಕ್ರಮ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು– ವರದಿ

ವಿಕ್ರಮ್‌ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು ಹಾಗೂ ಸಣ್ಣ ಪ್ರಮಾಣದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಅವರಿಗೆ ಹೃದಯಾಘಾತವಾಗಿದೆ ಎಂದು ಕೆಲ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸುಳ್ಳು ಎಂದು ವಿಕ್ರಮ್‌ ಪುತ್ರ ಧ್ರುವ ಸ್ಪಷ್ಟಪಡಿಸಿದ್ದಾರೆ. ಅಂತಹ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.

ವಿಕ್ರಮ್ ಈ ವರ್ಷ ಎರಡು ಚಿತ್ರಗಳ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಬಹಳ ತಡವಾಗಿರುವ ಅಜಯ್ ಜ್ಞಾನಮೂರ್ತಿ ನಿರ್ದೇಶನದ 'ಕೋಬ್ರಾ' ಇದೇ ಆಗಸ್ಟ್ 11ಕ್ಕೆ ತೆರೆ ಕಾಣುತ್ತಿದ್ದು, ಮಣಿರತ್ನಂ ನಿರ್ದೆಶನದ ‘ಪೊನ್ನಿಯಿನ್ ಸೆಲ್ವನ್’ಸೆಪ್ಟೆಂಬರ್ 30ಕ್ಕೆ ಬಿಡುಗಡೆ ಆಗಲಿದೆ.

ಇದರ ಜೊತೆಗೆ ಇದೇ ಮೊದಲ ಬಾರಿಗೆ ಪಾ ರಂಜಿತ್ ನಿರ್ದೆಶನದ ಸಿನಿಮಾದಲ್ಲೂ ವಿಕ್ರಮ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ಮಾಪಕ ಜ್ಞಾನ ವೆಲ್ ರಾಜ ಈ ಮಾಹಿತಿ ಬಹಿರಂಗಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು