ರ್ಯಾಪ್ ಸಾಂಗ್ಗಳಿಂದಲೇ ಜನಪ್ರಿಯರಾದ ಚಂದನ್ ಶೆಟ್ಟಿ ಸದ್ಯ ಗೀತೆಯೊಂದಕ್ಕಾಗಿ ಕ್ರಿಕೆಟಿಗ ಕ್ರಿಸ್ ಗೇಲ್ ಜತೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಕ್ರಿಸ್ ಗೇಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದು, ಅದರಲ್ಲಿ ಚಂದನ್ ಶೆಟ್ಟಿಯನ್ನು ‘ರಾಕ್ ಸ್ಟಾರ್’ ಎಂದು ಬಣ್ಣಿಸಿದ್ದಾರೆ.

‘ಯೂನಿವರ್ಸಲ್ ಬಾಸ್ ಗೇಲ್ ಜತೆಗೆ ‘ಲೈಫ್ ಈಸ್ ಕೆಸಿನೋ’ ಎಂಬ ಹಾಡನ್ನು ಚಿತ್ರೀಕರಿಸುತ್ತಿದ್ದೇನೆ. ಸದ್ಯ ವಿದೇಶಿದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಾನು ಅದರಲ್ಲಿ ಭಾಗಿಯಾಗಿರುವೆ. ಇದೊಂದು ರ್ಯಾಪ್ ಸಾಂಗ್. ಮೊದಲ ಸಲ ಕನ್ನಡ, ಇಂಗ್ಲಿಷ್ನಲ್ಲಿ ನಾವಿಬ್ಬರು ಹಾಡು ಹೇಳಿ, ಕುಣಿದಿದ್ದೇವೆ. ಇಂಗ್ಲಿಷ್ ಹಾಡನ್ನು ಗೇಲ್ ಹಾಡಿದ್ದಾರೆ. ಅವರು ಕನ್ನಡದ ಒಂದು ಸಾಲನ್ನೂ ಹಾಡುತ್ತಾರೆ. ಗಣೇಶನ ಹಬ್ಬಕ್ಕೆ ವಿಡಿಯೊ ಸಾಂಗ್ ಬಿಡುಗಡೆ ಮಾಡುವ ಆಲೋಚನೆಯಿದೆ. ಸಾಮಾಜಿಕ ಜಾಲತಾಣ ಹಾಗೂ ನಮ್ಮಿಬ್ಬರ ಯೂಟ್ಯೂಬ್ಗಳಲ್ಲಿ ಬಿಡುಗಡೆಗೊಳ್ಳಲಿದೆ. ಈ ಹಾಡು ಮಾಡಿ ಎರಡು ವರ್ಷ ಆಗಿತ್ತು. ಗೇಲ್ಗಾಗಿ ಕಾಯುತ್ತಿದ್ದೆ’ ಎಂದು ಚಂದನ್ ಶೆಟ್ಟಿ ತಿಳಿಸಿದರು.

ರ್ಯಾಪ್ ಸಾಂಗ್ಗಳಿಂದಲೇ ಚಿತ್ರರಂಗಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ ನಟನೆಯ ‘ಸೂತ್ರಧಾರಿ’ ಚಿತ್ರ ಕೆಲ ತಿಂಗಳ ಹಿಂದೆ ತೆರೆ ಕಂಡಿತ್ತು. ಇದೀಗ ಮತ್ತೆ ಬೃಹತ್ ಯೋಜನೆಯೊಂದಿಗೆ ಅವರು ಮರಳಿದ್ದಾರೆ. ಇವರ ‘ಟಾಪ್ ಟು ಬಾಟಮ್‘, ‘3 ಪೆಗ್’, ‘ಚಾಕೊಲೇಟ್ ಗರ್ಲ್’ ಮುಂತಾದ ಹಾಡುಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.