ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸಮ್ಮಾನ | ಅತ್ಯುತ್ತಮ ನಟ ಶಿಶಿರ್ ಬೈಕಾಡಿ: ‘ನಟನ’ದ ಪ್ರತಿಭೆಗೆ ಒಲಿದ ಸಮ್ಮಾನ

Published 4 ಜುಲೈ 2024, 23:30 IST
Last Updated 4 ಜುಲೈ 2024, 23:30 IST
ಅಕ್ಷರ ಗಾತ್ರ

‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರದಲ್ಲಿನ ನಟನೆಗಾಗಿ ಶಿಶಿರ್‌ ಬೈಕಾಡಿ ಅತ್ಯುತ್ತಮ ನಟ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇವರಿಗೆ ನಟ ಕಿಶೋರ್‌ ಪ್ರಶಸ್ತಿ ನೀಡಿದರು. ನಟ ರಮೇಶ್‌ ಅರವಿಂದ್‌, ನಟಿ ಶೃತಿ ಹರಿಹರನ್‌ ಜೊತೆಯಾದರು.

‘ಲೆಜೆಂಡರಿ ನಟರ ಜತೆಗೆ ನಾಮನಿರ್ದೇಶನಗೊಂಡಿದ್ದು ಖುಷಿಯಾಯಿತು. ಅದರಲ್ಲೂ ಪ್ರಶಸ್ತಿ ಬಂದಿರುವುದು ಖುಷಿಯನ್ನು ಇಮ್ಮಡಿಗೊಳಿಸಿದೆ. ಇದಕ್ಕೆ ಕಾರಣವಾದ ‘ಪ್ರಜಾವಾಣಿ’ಗೆ ಧನ್ಯವಾದಗಳು. ಶಿವಣ್ಣ ಅವರನ್ನು ಥೇಟರ್‌ನಲ್ಲಿ ನೋಡುತ್ತಾ ವಿಷೆಲ್ ಹೊಡೀತಾ ಇದ್ದೆ. ಈಗ ಅವರ ಜತೆಗೇ ನಾಮನಿರ್ದೇಶನಗೊಂಡು ಪ್ರಶಸ್ತಿ ಪಡೆದಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ಇದರಿಂದ ತಾಜಾತನದಿಂದ ಮತ್ತಷ್ಟು ಹೊಸ ಸಿನಿಮಾ ಮಾಡಲು ಸ್ಫೂರ್ತಿ ದೊರೆತಿದೆ. ಸದ್ಯಕ್ಕೆ ದುನಿಯಾ ವಿಜಯ್‌ ಅವರೊಂದಿಗೆ ಸೇರಿದಂತೆ ಒಟ್ಟು ಮೂರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವೆ. ಹಿಂದೆ ಕಂಡ ಕನಸು ಈಗ ನನಸಾಗುತ್ತಿರುವ ಖುಷಿ ಇದೆ’ ಎಂದು ಪ್ರಶಸ್ತಿ ಕುರಿತು ಸಂತಸಹಂಚಿಕೊಂಡರು ಶಿಶಿರ್‌ ಬೈಕಾಡಿ.

ಮೈಸೂರಿನವರಾದ ಇವರು ‘ನಟನ’ ರಂಗಶಾಲೆಯ ವಿದ್ಯಾರ್ಥಿ. ಆರನೇ ವರ್ಷದಿಂದಲೇ ನಟನೆ ಪ್ರಾರಂಭಿಸಿ, ಪಿಯುಸಿ ಮುಗಿಯುತ್ತಿದ್ದಂತೆ ರಂಗಭೂಮಿಯನ್ನು ಗಂಭೀರವಾಗಿ ಪರಿಗಣಿಸಿ, ಅದರಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ಇವರು ಈ ಚಿತ್ರದಲ್ಲಿ ‘ಮುಸ್ತಾಫಾ’ನ ಪಾತ್ರ ನಿರ್ವಹಿಸಿದ್ದು, ಈ ಪಾತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದರು. ಮೈಸೂರಿನ ಮಸೀದಿಗೆ ಭೇಟಿ ತಿಂಗಳ ಕಾಲ ಅಲ್ಲಿನ ಪರಿಸರವನ್ನು ಗಮನಿಸಿ, ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಪ್ರೇಕ್ಷಕರ ಗಮನ ಸೆಳೆದರು. ಸದ್ಯ ಜಡೇಶ್‌ ಹಂಪಿ ನಿರ್ದೇಶನದಲ್ಲಿ, ದುನಿಯಾ ವಿಜಯ್‌ ನಟಿಸುತ್ತಿರುವ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ⇒v

ನಾಮನಿರ್ದೇಶನಗೊಂಡಿದ್ದವರು

ರಾಜ್‌ ಬಿ. ಶೆಟ್ಟಿ ಚಿತ್ರ: ಟೋಬಿ, ಸ್ವಾತಿ ಮುತ್ತಿನ ಮಳೆ ಹನಿಯೇ

ಶಿವರಾಜ್‌ಕುಮಾರ್‌ ಚಿತ್ರ: ಘೋಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT