ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಾದಗಳಿಂದಾಚೆ ಈಗ ಸ್ವರಾ ಬದುಕು...

Published 22 ಜೂನ್ 2024, 5:26 IST
Last Updated 22 ಜೂನ್ 2024, 5:26 IST
ಅಕ್ಷರ ಗಾತ್ರ

ನಾನು ವಿವಾದಾತ್ಮಕ ನಟಿ ಎಂಬ ಪಟ್ಟ ಕಟ್ಟಿದ ನಂತರ ನನಗೆ ಅವಕಾಶಗಳೇ ಕಡಿಮೆಯಾದವು. ಸದ್ಯಕ್ಕೆ ರಾಬಿಯಾ ಹುಟ್ಟಿದ ನಂತರ ನನ್ನ ಜಗತ್ತೇ ಬದಲಾಗಿದೆ. ಆದರೆ ನಟನೆಯಿಂದ ಕಳಚಿಕೊಂಡಿರುವ ಬಗ್ಗೆ ನೋವಿದೆ ಎಂದು ಸ್ವರಾ ಭಾಸ್ಕರ್ ವಿಷಾದ ವ್ಯಕ್ತಪಡಿಸಿದ್ದಾರೆ.

ತನು ವೆಡ್ಸ್‌ ಮನು ಸರಣಿ ಚಿತ್ರಗಳಲ್ಲಿ ನಟಿಸಿದ್ದ ಸ್ವರಾ ಹಲವಾರು ವೆಬ್‌ಸಿರೀಸ್‌ಗಳಲ್ಲಿಯೂ ನಟಿಸಿದ್ದಾರೆ. ತಮ್ಮ ರಾಜಕೀಯ ನಿಲುವುಗಳನ್ನು ನಿರ್ಭೀತರಾಗಿ ಹೇಳಿರುವುದಕ್ಕೇ ಅವಕಾಶಗಳಿಂದ ವಂಚಿತಳಾದೆ ಎಂದು ಈಚೆಗೆ ಅವರು ಸಾಮಾಜಿಕ ಮಾಧ್ಯಮದ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಫಹಾದ್‌ನೊಂದಿಗೆ ಮದುವೆಯಾದ ನಂತರ ಕಳೆದ ಸೆಪ್ಟೆಂಬರ್‌ನಲ್ಲಿ ರಾಬಿಯಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ದೇಖುರೇಕಿಯಲ್ಲಿ ಕಳೆದುಹೋಗಿರುವ ಸ್ವರಾ ಈಚೆಗೆ ತಾವು ನಟನೆಯಿಂದ ದೂರ ಉಳಿಯಲು ಈ ತಾಯ್ತನ ಕಾರಣವಲ್ಲ. ಅವಕಾಶಗಳ ಕೊರತೆಯೇ ಕಾರಣ. ಅವಕಾಶಗಳು ಕಳೆದುಕೊಳ್ಳಲು ಕಾರಣ ತಮ್ಮ ಹೇಳಿಕೆಗಳಿಂದಾಗಿ  ಸಿನಿಮಾ ಇಂಡಸ್ಟ್ರಿಯು ವಿವಾದಾಸ್ಪದ ನಟಿ ಎಂಬ ಪಟ್ಟವನ್ನು ನೀಡಿತು. ಆ ಕಾರಣದಿಂದಾಗಿ ತಮಗೆ ಅವಕಾಶಗಳು ಕಡಿಮೆಯಾಗುತ್ತ ಹೋದವು ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

ಲವ್‌ ಜೆಹಾದ್‌, ಹಿಜಾಬ್‌ ಕುರಿತು ಮಾಡಿದ ಟ್ವೀಟ್‌ಗಳು ಹೆಚ್ಚು ಟ್ರೋಲ್‌ ಆಗಿದ್ದವು. ರಾಜಕಾರಣಿಯೊಬ್ಬರು ಪಠಾಣ್‌ ಚಿತ್ರದ ಬೇಷರಮ್‌ ಇಷ್ಕ್‌ ಹಾಡಿನ ಬಗ್ಗೆ ಟೀಕಿಸಿದಾಗ ಸ್ವರಾ ಪ್ರತಿಭಟಿಸಿದ್ದರು. ರಾಜಕಾರಣಿಗಳು, ನಟಿಯರ ಬಟ್ಟೆಯ ಉದ್ದವನ್ನು ನೋಡುವುದು ಬಿಟ್ಟು, ತಮ್ಮ ಕೆಲಸಗಳತ್ತ ಗಮನ ನೀಡಲಿ ಎಂದು ಹೇಳಿದ್ದರು. ಇಂಥ ಹೇಳಿಕೆಗಳಿಂದಾಗಿ ಸ್ವರಾ ಭಾಸ್ಕರ್‌ಗೆ ವಿವಾದಾಸ್ಪದ ನಟಿ ಎಂಬ ಪಟ್ಟ ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT