ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಸ್‌’ ರೂಪೇಶ್‌ಗೆ ತೆಲುಗಿನ ಆಫರ್‌

Last Updated 4 ಮೇ 2022, 6:22 IST
ಅಕ್ಷರ ಗಾತ್ರ

ಕೋಸ್ಟಲ್‌ವುಡ್‌ ನಾಯಕ ರೂಪೇಶ್‌ ಶೆಟ್ಟಿ ನಿರ್ದೇಶನದ ‘ಸರ್ಕಸ್‌’ ಸಿನಿಮಾ ಡಬ್ಬಿಂಗ್‌ ಹಂತದಲ್ಲಿದೆ. ಸುಮಾರು ಒಂದೂವರೆ ತಿಂಗಳ ಹಿಂದಷ್ಟೇ ಆರಂಭವಾಗಿದ್ದ ‘ಸರ್ಕಸ್‌’ ಚಿತ್ರದ ಚಿತ್ರೀಕರಣ ಮುಗಿದು ಕಲಾವಿದರು ಡಬ್ಬಿಂಗ್‌ ಸ್ಟುಡಿಯೊದಲ್ಲಿದ್ದಾರೆ. ಡಬ್ಬಿಂಗ್‌ ಸ್ಟುಡಿಯೋದೊಳಗೆ ಕಲಾವಿದರ ಪರದಾಟ, ರಿಟೇಕ್‌ಗಳ ತುಣುಕುಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಶೀಘ್ರವೇ ತೆರೆ ಮೇಲೆ ‘ಸರ್ಕಸ್‌’ ನೋಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು ರೂಪೇಶ್‌.

ತುಳುವಿನಲ್ಲಿ ಮಿಂಚಿದ ರೂಪೇಶ್‌ ಅವರಿಗೆ ಅದಾಗಲೇ ತೆಲುಗಿನಲ್ಲಿಯೂ ಆಫರ್‌ ಬಂದಿದೆಯಂತೆ. ಒಂದು ಹಂತದ ಮಾತುಕತೆ ನಡೆದಿದೆ. ಕತೆ ಇಷ್ಟವಾಗಿದೆ. ಶೀರ್ಷಿಕೆ, ಚಿತ್ರೀಕರಣದ ಅವಧಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದಿದ್ದಾರೆ ರೂಪೇಶ್‌. ತೆಲುಗಿನಲ್ಲಿ ಆಫರ್‌ ಕೊಟ್ಟವರು ಯಾರು, ಏನು ಎಂಬ ಬಗ್ಗೆ ಶೀಘ್ರವೇ ಹೇಳುತ್ತಾರಂತೆ.

ಈಗ ಸರ್ಕಸ್‌ ವಿಚಾರಕ್ಕೆ ಬರೋಣ. ಆರ್.‌ಎಸ್.‌‌ಸಿನೆಮಾ ಮತ್ತು ಶೂಲಿನ್ ಫಿಲ್ಮ್ಸ್‌ ಲಾಂಛನದ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.ಆರ್.‌ಎಸ್.‌‌ಸಿನೆಮಾ, ಶೂಲಿನ್ ಫಿಲಂಸ್ ಬ್ಯಾನರ್‌ನಲ್ಲಿ ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಮತ್ತು ಮಂಜುನಾಥ್ ಅತ್ತಾವರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ದೀಕ್ಷಿತ್ ಆಳ್ವ ಕಾರ್ಯಕಾರಿ‌‌‌ ನಿರ್ಮಾಪಕರು.

ಮಂಗಳೂರು, ಮರವೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ನಟ ಯಶ್ ಶೆಟ್ಟಿ ‘ಸರ್ಕಸ್’ ಚಿತ್ರದ ಮೂಲಕ ಖಳನಟನಾಗಿ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಾಯಕಿಯಾಗಿ ರಚನಾ ರೈ ಪರಿಚಯವಾಗುತ್ತಿದ್ದಾರೆ.

ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಪ್ರಸನ್ನ ಶೆಟ್ಟಿ ಬೈಲೂರು ತಾರಾಗಣದಲ್ಲಿದ್ದಾರೆ. ರೂಪೇಶ್ ಶೆಟ್ಟಿ ಜತೆ ರಾಕೇಶ್ ಕದ್ರಿ ನಿರ್ದೇಶನಕ್ಕೆ ಜೊತೆಯಾಗಿದ್ದಾರೆ. ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ರಾಹುಲ್ ವಶಿಷ್ಠ ಸಂಕಲನ‌ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT