ಕೋಸ್ಟಲ್ವುಡ್ ನಾಯಕ ರೂಪೇಶ್ ಶೆಟ್ಟಿ ಕೇವಲ ನಾಯಕರಾಗಿಯಷ್ಟೇ ಅಲ್ಲ, ಈ ಬಾರಿ ನಿರ್ದೇಶಕನ ‘ಸರ್ಕಸ್’ ಆರಂಭಿಸಿದ್ದಾರೆ. ಸುಮಾರು 20 ದಿನಗಳ ಹಿಂದಷ್ಟೇ ಆರಂಭವಾಗಿದ್ದ ಚಿತ್ರೀಕರಣ ಈಗ ಮಾತಿನ ಭಾಗ ಹಾಗೂ ಸಾಹಸ ದೃಶ್ಯಗಳ ಶೂಟಿಂಗ್ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆಯಂತೆ.

ಆರ್.ಎಸ್.ಸಿನೆಮಾ ಮತ್ತು ಶೂಲಿನ್ ಫಿಲ್ಮ್ಸ್ ಲಾಂಛನದ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಮತ್ತು ಮಂಜುನಾಥ್ ಅತ್ತಾವರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ

ಮಂಗಳೂರು, ಮರವೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ರೂಪೇಶ್ ಫೇಸ್ಬುಕ್/ಇನ್ಸ್ಟಾಗ್ರಾಂ ಲೈವ್ನಲ್ಲಿ ಬಂದು ರೂಪೇಶ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.

ನಟ ಯಶ್ ಶೆಟ್ಟಿ ‘ಸರ್ಕಸ್’ ಚಿತ್ರದ ಮೂಲಕ ಖಳನಟನಾಗಿ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಾಯಕಿಯಾಗಿ ರಚನಾ ರೈ ಪರಿಚಯವಾಗುತ್ತಿದ್ದಾರೆ.

ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಪ್ರಸನ್ನ ಶೆಟ್ಟಿ ಬೈಲೂರು ತಾರಾಗಣದಲ್ಲಿದ್ದಾರೆ. ರೂಪೇಶ್ ಶೆಟ್ಟಿ ಜತೆ ರಾಕೇಶ್ ಕದ್ರಿ ನಿರ್ದೇಶನಕ್ಕೆ ಜೊತೆಯಾಗಿದ್ದಾರೆ. ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ರಾಹುಲ್ ವಶಿಷ್ಠ ಸಂಕಲನ ಈ ಚಿತ್ರಕ್ಕಿದೆ. ‘ಕೋವಿಡ್ ಪರಿಸ್ಥಿತಿ ತಿಳಿಯಾಗಿ ನಿರ್ಬಂಧಗಳು ಸಡಿಲವಾದ ಬಳಿಕ ಚಿತ್ರ ಬಿಡುಗಡೆ ಮಾಡುತ್ತೇವೆ’ ಎಂದು ರೂಪೇಶ್ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.