ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧ್ಯಾಕಾಲದ ಸುಖಃ ದುಃಖ ವಿನಿಮಯಕ್ಕೆ ಕಾಫಿಕಟ್ಟೆ

Last Updated 1 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹಾಸ್ಯ ಕಲಾವಿದರು ಒಟ್ಟಿಗೆ, ಒಂದೇ ಚಿತ್ರದಲ್ಲಿ ಸೇರುವುದು ಅಪರೂಪ.ಹಾಸ್ಯ ಕಲಾವಿದರಿಂದಲೇ ಕೂಡಿದ,ಭಾರ್ಗವ ನಿರ್ದೇಶನದ ‘ಗುರುಶಿಷ್ಯರು’ ಸಿನಿಮಾ1981ರಲ್ಲಿ ತೆರೆಕಂಡು ಯಶಸ್ವಿಯಾಗಿತ್ತು.ಈಗ ಅದೇ ರೀತಿ ಸುಮಾರು 35 ಮಂದಿ ಹಿರಿ–ಕಿರಿಯಹಾಸ್ಯ ಕಲಾವಿದರಿಂದ ತುಂಬಿದ ‘ಕಾಪಿ ಕಟ್ಟೆ’ ಸಿನಿಮಾ ಸೆಟ್ಟೇರಿದೆ. ಕಂಠೀರವ ಸ್ಟುಡಿಯೊದಲ್ಲಿ ಈ ಸಿನಿಮಾ ಮುಹೂರ್ತ ಕೂಡ ನಡೆದಿದ್ದು, ಮೊದಲ ದೃಶ್ಯದಚಿತ್ರೀಕರಣಕ್ಕೆಶಾಸಕ ಅಶ್ವಥ್‍ನಾರಾಯಣ್ ಚಾಲನೆ ನೀಡಿದರು.

ಮೂಲತ: ನೃತ್ಯ ನಿರ್ದೇಶಕರಾಗಿರುವ ಕಪಿಲ್‌,ಹಾಸ್ಯ ಕಲಾವಿದರನ್ನೇ ಕೇಂದ್ರವಾಗಿಟ್ಟುಕೊಂಡುಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜಿ.ರಾಘವೇಂದ್ರ ಬಂಡವಾಳ ಹೂಡಿದ್ದಾರೆ.

ಆನಂದ ರೆಡ್ಡಿ- ಶ್ರುತಿ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಎಂ.ಎಸ್.ಉಮೇಶ್, ಬೆಂಗಳೂರು ನಾಗೇಶ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಬ್ಯಾಂಕ್‍ ಜನಾರ್ಧನ್, ಶಂಖನಾದ ಅರವಿಂದ್, ಮೈಸೂರು ರಮಾನಂದ್, ಮನದೀಪ್‍ರಾಯ್, ಶಂಕರ್‌ ಭಟ್, ಬಿರಾದರ್, ದೊಡ್ಡಣ್ಣ, ಮಿಮಿಕ್ರಿ ದಯಾನಂದ್, ಟೆನ್ನಿಸ್‍ ಕೃಷ್ಣ, ಮೈಕೆಲ್‌ ಮಧು, ರಮೇಶ್‍ ಭಟ್, ಸುಂದರರಾಜ್, ಗಣೇಶ್‍ರಾವ್, ರೇಖಾದಾಸ್ ಮುಂತಾದವರ ತಾರಾಗಣವಿದೆ. ಕಲಾಕಾರ್‌ ಗೋಪಿ ಸಂಗೀತವಿದೆ.

ಮನುಷ್ಯನ ಇಳಿಗಾಲದ ಬದುಕು ಯಾವ ರೀತಿಯಲ್ಲಿ ಇರಲಿದೆ, ಕುಟುಂಬಗಳಲ್ಲಿ ಎದುರಾಗುವ ಸನ್ನಿವೇಶಗಳು, ಮನೋವ್ಯಥೆಗಳು ಈ ಚಿತ್ರದ ಕಥಾಹಂದರವಾಗಿವೆ. ಹಿರಿಯ ನಾಗರಿಕರು ತಮ್ಮ ಬದುಕಿನ ಕಥೆ–ವ್ಯಥೆ ಹಂಚಿಕೊಳ್ಳಲು ಸೇರುವ ಜಾಗವೇ ಕಾಫಿ ಕಟ್ಟೆ. ಹಾಗಾಗಿಯೇ ಈ ಸಿನಿಮಾಕ್ಕೆ ಅದೇ ಶೀರ್ಷಿಕೆ ಇಡಲಾಗಿದೆ.ಒಂದೇ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎನ್ನುತ್ತಾರೆ ನಿರ್ದೇಶಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT