ಶುಕ್ರವಾರ, ಮಾರ್ಚ್ 31, 2023
22 °C

‘ಲವ್‌ಸ್ಟೋರಿ’ ಖರೀದಿಗೆ ಒಟಿಟಿ ವೇದಿಕೆಗಳ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಟಾರ್ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ಹಾಗೂ ಸಾಯಿಪಲ್ಲವಿ ನಟನೆಯ ಬಹುನಿರೀಕ್ಷಿತ ‘ಲವ್‌ಸ್ಟೋರಿ’ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಈ ಸುಂದರ ಪ್ರೇಮಕತೆಯಲ್ಲಿ ಸಾಯಿಪಲ್ಲವಿ ಕಾಲೇಜು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದು ನಾಗಚೈತನ್ಯ ತೆಲಂಗಾಣದ ಗ್ರಾಮೀಣ ಭಾಗದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾ ಘೋಷಣೆಯಾದ ದಿನದಿಂದಲೂ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಕ್ರೇಜ್‌ಗೆ ಕಾರಣ ಈ ಹಿಂದೆ ಶೇಖರ್‌ ಕಮ್ಮುಲ ಹಾಗೂ ಸಾಯಿಪಲ್ಲವಿ ಜೋಡಿ ನೀಡಿದ್ದ ‘ಫಿದಾ’ದಂತಹ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾವು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು.

ಸದ್ಯ ‘ಲವ್‌ ಸ್ಟೋರಿ’ ಸಿನಿಮಾದ ಒಟಿಟಿ ಹಕ್ಕಿಗಾಗಿ ಜೀ5 ಹಾಗೂ ಅಮೆಜಾನ್‌ ಪ್ರೈಮ್ ನಡುವೆ ಪೈಪೋಟಿ ಉಂಟಾಗಿದೆಯಂತೆ. ಜೀ5 ಆರಂಭಿಕ ಸ್ಪರ್ಧಿಯಾಗಿತ್ತು. ಈಗ ಅಮೆಜಾನ್ ಪ್ರೈಮ್ ಸಿನಿಮಾಕ್ಕೆ ಹೆಚ್ಚು ಹಣ ನೀಡಲು ಸಿದ್ಧವಾಗಿದೆ. ಈ ಎರಡರ ನಡುವೆ ‘ಲವ್‌ ಸ್ಟೋರಿ’ ಯಾರ ಕೈ ಸೇರಲಿದೆ ಕಾದು ನೋಡಬೇಕಿದೆ.

ಈ ಸಿನಿಮಾಕ್ಕೆ ಸುನೀಲ್ ನಾರಂಗ್ ಬಂಡವಾಳ ಹೂಡಿಕೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು