ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಜನಿಕಾಂತ್ ಅಭಿನಯದ ’ಕೂಲಿ‘ ಸಿನಿಮಾದ ದೃಶ್ಯ ಸೋರಿಕೆ: ನಿರ್ದೇಶಕ ಬೇಸರ

Published : 19 ಸೆಪ್ಟೆಂಬರ್ 2024, 7:39 IST
Last Updated : 19 ಸೆಪ್ಟೆಂಬರ್ 2024, 7:39 IST
ಫಾಲೋ ಮಾಡಿ
Comments

ಬೆಂಗಳೂರು: ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ದೃಶ್ಯ ಲೀಕ್ ಆಗಿರುವುದಕ್ಕೆ ನಿರ್ದೇಶಕ ಲೋಕೇಶ್ ಕನಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ರಜನಿಕಾಂತ್, ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ ಅವರಂಥ ಸ್ಟಾರ್ ಕಲಾವಿದರು ನಟಿಸುತ್ತಿರುವ ಕೂಲಿ ಸಿನಿಮಾ ಇದಾಗಿದೆ. ನಟ ನಾಗಾರ್ಜುನ ಇರುವ ಕೆಲ ದೃಶ್ಯ ಹಾಗೂ ಫೋಟೊಗಳು ಲೀಕ್‌ ಆಗಿದ್ದವು.

ಇಂತಹ ಸೋರಿಕೆಯಿಂದ ಹಲವು ಜನರ ಎರಡು ತಿಂಗಳ ಶ್ರಮ ವ್ಯರ್ಥವಾಯಿತು. ಈ ರೀತಿಯ ಕೆಲಸ ಮಾಡಬೇಡಿ. ಇದು ಒಳ್ಳೆಯ ಅನುಭವವನ್ನು ನಾಶ ಮಾಡುತ್ತದೆ ಎಂದು ಲೋಕೇಶ್ ಕನಗರಾಜ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ರಜನಿಕಾಂತ್ ಅವರು ಸದ್ಯ ‘ವೆಟ್ಟೈಯನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT