ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಸಿನಿಮಾ ನಿರ್ಮಾಣದತ್ತ ಧೋನಿ ಚಿತ್ತ

Published:
Updated:
Prajavani

ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಎಂ.ಎಸ್‌.ಧೋನಿ ಸಿನಿಮಾ ಜಗತ್ತಿಗೆ ಕಾಲಿಡಲಿದ್ದಾರೆ. ಬಳಿಕ ಚಿತ್ರರಂಗದಲ್ಲೇ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಇದೆ. 

ನಟನಾಗಿ ಅಲ್ಲ, ಬದಲಾಗಿ ಸಿನಿಮಾ ನಿರ್ಮಾಣದಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಈ ಕುರಿತು ಕೆಲ ನಿರ್ದೇಶಕರ ಜೊತೆ ಮಾತುಕತೆಯನ್ನೂ ನಡೆಸಿದ್ದಾರೆ. ತಮ್ಮದೇ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ರೂಪಿಸುವ ಯೋಚನೆಯೂ ಅವರಿಗಿದೆ ಎಂದು ಅವರ ಹತ್ತಿರದ ಮೂಲಗಳು ತಿಳಿಸಿವೆ. 

ಧೋನಿಗೆ ಮೊದಲಿನಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಇತ್ತು. ಅವರು ಸಿನಿಮಾ ಪ್ರಿಯರೂ ಕೂಡ. ತಮ್ಮ ಜೀವನಚರಿತ್ರೆ ಆಧರಿಸಿದ ಸಿನಿಮಾ ‘ಎಂ.ಎಸ್‌. ಧೋನಿ: ದ ಅನ್‌ಟೊಲ್ಡ್‌ ಸ್ಟೋರಿ’ ಸಂದರ್ಭದಲ್ಲಿ ಬಲು ಹತ್ತಿರದಿಂದ ಸಿನಿಮಾ ಕೆಲಸಗಳನ್ನು ಕಂಡಿದ್ದರು. ಆಗಲೇ ಅವರಿಗೆ ಸಿನಿಮಾ ನಿರ್ಮಾಣದತ್ತ ಒಲವು ಮೂಡಿತ್ತು ಎನ್ನಲಾಗಿದೆ. 

ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬಳಿಕ ಈ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಬಹುದು. ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾದಲ್ಲಿ ಅವರ ಸ್ನೇಹಿತ, ನಟ ಜಾನ್‌ ಅಬ್ರಹಾಂ ನಾಯಕನಾಗಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.

Post Comments (+)