‘ಭೀಮ’ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿ ‘ಗಿರಿಜಾ’ ಆಗಿ ಮಿಂಚಿದ್ದ ನಟಿ ಪ್ರಿಯಾ ಶಠಮರ್ಷಣ ನಟನೆಯ ‘ಕಸ್ಟಡಿ’ ಇಂದು (ಆ.8) ತೆರೆಕಂಡಿದೆ. ಜೆ.ಜೆ.ಶ್ರೀನಿವಾಸ್ ನಿರ್ದೇಶನದ ಈ ಚಿತ್ರದಲ್ಲಿ ‘ದುರ್ಗಾಪರಮೇಶ್ವರಿ’ಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಅವರು ‘ಸಿನಿಮಾ ರಂಜನೆ’ ಜೊತೆ ಮಾತನಾಡಿದ್ದಾರೆ.

‘ಭೀಮ’ ಸಿನಿಮಾದ ‘ಗಿರಿಜಾ’ ಪಾತ್ರದ ಪರಿಣಾಮ...

ಈ ಸಿನಿಮಾದ ಬಳಿಕ ಅವಕಾಶಗಳು ಹಲವಾರು ಬಂದರೂ ಒಂದೇ ಮಾದರಿಯಲ್ಲಿನ ಪಾತ್ರಗಳು ಅವುಗಳಲ್ಲಿದ್ದವು. ಈ ಪೈಕಿ ಬಹುತೇಕ ಎಲ್ಲವೂ ಖಡಕ್ ಪೊಲೀಸ್ ಅಧಿಕಾರಿ ಪಾತ್ರಗಳೇ. ‘ಗಿರಿಜಾ’ಳನ್ನು ನೋಡಿ ಪ್ರಭಾವಕ್ಕೊಳಗಾಗಿ ಬರೆದ ಕಥೆ, ಪಾತ್ರಗಳವು. ಇವುಗಳಲ್ಲಿ ಪೊಲೀಸ್ ಠಾಣೆಗಳು, ಪ್ರಕರಣಗಳಷ್ಟೇ ಬದಲಾಗಿದ್ದವು ಅಷ್ಟೇ! ಹೀಗಾಗಿ ಹಲವು ಕಥೆಗಳನ್ನು ತಿರಸ್ಕರಿಸಿದ್ದೆ. ಈ ವಿಷಯದಲ್ಲಿ ಬೇಸರವಿದೆ. ಆದರೆ, ಒಂದೇ ರೀತಿಯ ಪಾತ್ರಗಳನ್ನು ಮುಂದುವರಿಸಿದರೆ ಏಕತಾನತೆ ಆಗುತ್ತದೆ ಎನ್ನುವ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೆ.

‘ಕಸ್ಟಡಿ’ಯ ನಿರ್ದೇಶಕರು ಆರಂಭದಲ್ಲಿ ‘ಪಾಲ್ಗುಣಿ’ ಕಥೆ ತಂದಿದ್ದರು. ಆ ಸಂದರ್ಭದಲ್ಲಿ ಒಪ್ಪಿಗೆ ನೀಡಲು ಸಮಯ ತೆಗೆದುಕೊಂಡಿದ್ದೆ. ಆ ಅವಧಿಯಲ್ಲೇ ಅವರು ಮತ್ತೊಂದು ಕಥೆಯಾಗಿ ‘ಕಸ್ಟಡಿ’ ವಿವರಿಸಿದ್ದರು. ‘ಭೀಮ’ ಬಳಿಕ ಒಪ್ಪಿಕೊಂಡ ಮೊದಲ ಸಿನಿಮಾ ಇದು. ‘ಭೀಮ’ದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಶೇಡ್ ಅಷ್ಟೇ ಇತ್ತು. ‘ಕಸ್ಟಡಿ’ಯ ಕಥೆ ವಿಶೇಷವಾಗಿತ್ತು ಹಾಗೂ ‘ದುರ್ಗಾಪರಮೇಶ್ವರಿ’ ಎಂಬ ಪಾತ್ರದೊಳಗೆ ಇಳಿದು ನಟನೆಯ ಸಾಮರ್ಥ್ಯ ಪ್ರದರ್ಶಿಸಲು ಶೇಡ್ಗಳು ಇಲ್ಲಿವೆ. ಹೀಗಾಗಿ ಒಪ್ಪಿಕೊಂಡೆ.

ಯಾರು ಈ ‘ದುರ್ಗಾಪರವೇಶ್ವರಿ’?

‘ಗಿರಿಜಾ’ಳಂತೆಯೇ ‘ದುರ್ಗಾಪರಮೇಶ್ವರಿ’ಯೂ ಖಡಕ್, ನಿಯತ್ತಿನ ಪೊಲೀಸ್ ಅಧಿಕಾರಿ. ಪ್ರತಿನಿತ್ಯ ಮೊಬೈಲ್ ಕ್ರೈಂ, ಸೈಬರ್ ಕ್ರೈಂನಿಂದ ಸಾವಿರಾರು ಜನರು ಮೋಸ ಹೋಗುತ್ತಿದ್ದಾರೆ. ಇಂತಹ ಒಂದು ಜಾಲದ ಬೆನ್ನತ್ತಿ ಹೋಗುವ ಕಥೆ ಸಿನಿಮಾದಲ್ಲಿದೆ. ಒಂದು ಸರಣಿ ಹತ್ಯೆಯನ್ನು ಭೇದಿಸುವ ದೃಶ್ಯಗಳಿಂದ ಕಥೆ ಆರಂಭವಾಗುತ್ತದೆ. ಸಿನಿಮಾದೊಳಗೆ ಹಲವು ತಿರುವುಗಳು ಇವೆ. ಪ್ರತಿಯೊಬ್ಬರೊಳಗೂ ಹಲವು ಶೇಡ್ಗಳು ಇರುತ್ತವೆ. ‘ಗಿರಿಜಾ’ಳಿಗೆ ಒಂದೇ ಶೇಡ್ ಇತ್ತು. ಅವಳ ಸಂಭಾಷಣೆಯೂ ಅಷ್ಟೇ ಖಾರವಾಗಿತ್ತು. ‘ದುರ್ಗಾಪರಮೇಶ್ವರಿ’ಯೂ ಇಷ್ಟೇ ದಕ್ಷ ಅಧಿಕಾರಿ. ಆದರೆ ಬಳಸಿರುವ ಪೊಲೀಸ್ ಭಾಷೆ ಇದರಲ್ಲಿ ಇತಿಮಿತಿಯಲ್ಲಿದೆ.

ಒಪ್ಪಿಕೊಂಡಿರುವ ಹೊಸ ಸಿನಿಮಾಗಳು...

‘ಕುಂಭಸಂಭವ’ ರಿಲೀಸ್ಗೆ ಸಿದ್ಧವಾಗಿದೆ. ಇದರಲ್ಲಿ ಭ್ರೂಣಹತ್ಯೆಗೆ ಸಂಬಂಧಿಸಿದ ಕಥೆಯಿದೆ. ಇದರಲ್ಲೂ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ಶರತ್ ಲೋಹಿತಾಶ್ವ ಅವರ ಜೊತೆಗೆ ‘ಗಾಂಧಿ ಸ್ಕ್ವೇರ್’, ಅಗ್ನಿ ಎಂಬುವವರು ನಿರ್ದೇಶಿಸಿದ ‘ರುಧಿರವನ’ ಸಿನಿಮಾದಲ್ಲೂ ಬಣ್ಣಹಚ್ಚಿದ್ದೇನೆ. ಇದರಲ್ಲಿ ಪೊಲೀಸ್ ಅಧಿಕಾರಿಯಲ್ಲ. ಭಿನ್ನವಾದ ಪಾತ್ರಗಳು ದೊರಕಿವೆ. ಎರಡು ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಇವುಗಳು ಶೂಟಿಂಗ್ ಹಂತದಲ್ಲಿವೆ. ‘ಭೀಮ’ ಸಿನಿಮಾದಲ್ಲಿನ ಪಾತ್ರವನ್ನು ನೋಡಿಯೇ ಈ ಅವಕಾಶಗಳು ಬಂದಿತ್ತು. ಈ ಸಿನಿಮಾಗಳ ಪೈಕಿ ಒಂದರಲ್ಲಿ ಪೊಲೀಸ್ ಅಧಿಕಾರಿ ಪಾತ್ರವಿದೆ. ಒಂದು ಸಿನಿಮಾ ಚಾಮರಾಜನಗರದಲ್ಲಿ ನಡೆಯುವ ಕಥೆ ಹೊಂದಿದ್ದು, ಇದು ಕನ್ನಡದಲ್ಲೂ ತೆರೆಕಾಣಲಿದೆ.

ಒಂದೇ ದಿನ ಒಬ್ಬರೇ ನಿರ್ದೇಶಿಸಿದ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ...

ಹೌದು. ಇದೊಂದು ಸಾಹಸವೇ. ಈ ರೀತಿ ರಿಸ್ಕ್ ತೆಗೆದುಕೊಂಡಿರುವುದನ್ನು ನಾನು ನೋಡಿಲ್ಲ. ಒಂದು ಸಿನಿಮಾ ಬಿಡುಗಡೆ ಮಾಡುವ ಹೊತ್ತಿನಲ್ಲೇ ಸಾಕಾಗಿರುತ್ತದೆ. ಹೀಗಿರುವಾಗ ಒಬ್ಬರೇ ನಿರ್ದೇಶಿಸಿದ ಎರಡು ಸಿನಿಮಾಗಳನ್ನು ಒಬ್ಬರೇ ನಿರ್ಮಾಪಕರು ಒಂದೇ ದಿನ ತೆರೆಗೆ ತರುತ್ತಿರುವುದು ವಿಶೇಷ. ಕೆಲವು ಕಲಾವಿದರು ಎರಡೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡೂ ಸಿನಿಮಾಗಳು ಚೆನ್ನಾಗಿ ಆಗಲಿ ಎಂದು ಆಶಿಸಬಲ್ಲೆ ಅಷ್ಟೇ.

ದುನಿಯಾ ವಿಜಯ್ ಅವರ ಜೊತೆಗೆ ಮತ್ತೆ ಸಿನಿಮಾಗಳು ಇವೆಯೇ?

ನಾನು ‘ಸಿಟಿಲೈಟ್ಸ್’ನಲ್ಲಿ ಮಾಡಬೇಕಿತ್ತು. ವಿಜಯ್ ಅವರು ಯಾವುದೇ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಪಾತ್ರಗಳನ್ನು ಬರೆಯುತ್ತಾರೆ, ಆಯ್ಕೆ ಮಾಡುತ್ತಾರೆ. ‘ಗಿರಿಜಾ’ಳ ಪಾತ್ರ ನಿರೀಕ್ಷೆಗೂ ಮೀರಿ ಈ ಮಟ್ಟಕ್ಕೆ ಸದ್ದು ಮಾಡಿತ್ತು. ಆದರೆ ನಿರ್ದೇಶಕರಾಗಿ ಆ ಪಾತ್ರದ ಮೇಲೆ ಬಹಳ ನಂಬಿಕೆಯನ್ನು ವಿಜಯ್ ಅವರು ಇಟ್ಟುಕೊಂಡಿದ್ದರು. ‘ಈ ಪಾತ್ರ ನಿಮಗೆ ಬೇರೆಯದೇ ಆಯಾಮ ನೀಡುತ್ತದೆ’ ಎಂದು ಅವರು ಹೇಳಿದ್ದರು. ‘ಗಿರಿಜಾ’ಳ ಪಾತ್ರ ನೋಡಿ ಇಂದು ಹಲವು ಹೆಣ್ಣುಮಕ್ಕಳು ಪೊಲೀಸ್ ಅಧಿಕಾರಿಯಾಗಬೇಕು ಎಂದು ಓದುತ್ತಿದ್ದಾರೆ. ವಿಜಯ್ ಅವರು ಯಾವಾಗಲೂ ಹೊಸತನದಲ್ಲಿ ನಂಬಿಕೆ ಇಟ್ಟವರು. ಹೊಸಬರನ್ನು ತೆರೆಗೆ ತರುವ ಹುಮ್ಮಸ್ಸು ಅವರಲ್ಲಿದೆ. ಏಕತಾನತೆ ಆಗಬಾರದು ಎನ್ನುವ ಕಾರಣಕ್ಕೆ ಹೊಸಬರನ್ನು ಆಯ್ಕೆ ಮಾಡಿಕೊಂಡರು. ಹೆಣ್ಣುಮಕ್ಕಳಿಗಾಗಿಯೇ ಒಂದು ಕಥೆಯನ್ನು ಸಿದ್ಧಪಡಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ನಾನೂ ಅವರ ಕರೆಗಾಗಿ ಕಾಯುತ್ತಿದ್ದೇನೆ. ‘ಭೀಮ’ ಕೊನೆಯಲ್ಲಿ ‘ಸಲಗ’ ಸಿನಿಮಾಗೆ ಸಣ್ಣ ಲಿಂಕ್ ಇದೆ. ‘ಸಲಗ’ ಸೀಕ್ವೆಲ್ನಲ್ಲಿ ‘ಗಿರಿಜಾ’ ಮುಂದುವರಿಯುತ್ತಾಳಾ ಎಂದು ನೋಡಬೇಕಿದೆ. ನಾನಂತೂ ಕಾತುರದಿಂದ ಕಾಯುತ್ತಿದ್ದೇನೆ.

‘ಸೋಹಂ’ ತಂಡದ ಪಯಣ

‘ಸಿನಿಮಾ ಜೊತೆ ಜೊತೆಗೇ ಸಂಗೀತ ಪಯಣದಲ್ಲಿ ಹೊಸ ಹೆಜ್ಜೆ ಇಟ್ಟಿದ್ದೇನೆ. ರಂಗಭೂಮಿಯಿಂದ ಬಂದ ನನಗೆ ಇದು ಹಲವು ವರ್ಷಗಳ ಕನಸು. ರಂಗಭೂಮಿಯಲ್ಲಿದ್ದಾಗ ಜನಪದ ರಂಗಗೀತೆಗಳನ್ನು ಹಾಡುವ ಗೀಳು ಇತ್ತು. ನಾನು ನನ್ನ ಪತಿ ಅವಿನಾಶ್ ಸೇರಿಕೊಂಡು ‘ಸೋಹಂ’ ಎನ್ನುವ ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡಿದ್ದೇವೆ. ಹುಣ್ಣಿಮೆಯ ದಿನಗಳಂದು ಹಂಪಿ ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ನೀಡಿದ್ದು ಇದು ಮುಂದುವರಿಯಲಿದೆ. ಎಲ್ಲಾ ಜಾನರ್ನ ಹಾಡುಗಳನ್ನು ಇಲ್ಲಿ ಹಾಡುತ್ತೇವೆ’ ಎಂದರು ಪ್ರಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.