ಬುಧವಾರ, ಆಗಸ್ಟ್ 10, 2022
23 °C

ಮದುವೆ ಬಳಿಕ ಏನಾಯ್ತು?: ಅನುಭವ ಹಂಚಿಕೊಂಡ ದಾನಿಶ್ ಸೇಠ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Danish sait Instagram

ಬೆಂಗಳೂರು: ನಟ ಮತ್ತು ನಿರೂಪಕ ದಾನಿಶ್ ಸೇಠ್ ಕಳೆದ ವಾರ ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಅವರನ್ನು ಮದುವೆಯಾಗಿದ್ದಾರೆ.

ದಾನಿಶ್ ಸೇಠ್  ಮದುವೆ ವಿಚಾರವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಬಾರಿ ಮದುವೆ ಬಳಿಕ ಏನಾಯ್ತು ಎಂದು ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ದಾನಿಶ್ ಸೇಠ್ ವಿವರಿಸಿದ್ದಾರೆ.

ತನ್ನ ಎಂದಿನ ಶೈಲಿಯಲ್ಲಿ ದಾನಿಶ್ ಸೇಠ್, ವಿವಿಧ ರೀತಿಯ ಸಂಭಾಷಣೆಯನ್ನು ಅನುಕರಿಸಿ ಮದುವೆ ಬಳಿಕ ಜನರು ಏನು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಮದುವೆಯ ಮರುದಿನವೇ ಜನರು ವಿವಿಧ ಪ್ರಶ್ನೆಗಳನ್ನು ದಾನಿಶ್ ಸೇಠ್‌ಗೆ ಕೇಳಿದ್ದು, ಮದುವೆ ಹೇಗಾಯ್ತು, ಗುಡ್ ನ್ಯೂಸ್ ಯಾವಾಗ, ಹನಿಮೂನ್ ಏನು ಕಥೆ ಎಂಬೆಲ್ಲಾ ಪ್ರಶ್ನೆಗಳು ಬಂದಿವೆ.

 

ಮದುವೆಗೆ ಯಾಕೆ ಕರೆದಿಲ್ಲ ಎಂದು ಹಲವರು ಆಕ್ಷೇಪಿಸಿದರೆ, ಮತ್ತೆ ಕೆಲವರು ಮಕ್ಕಳ ಕುರಿತು ಏನು ಯೋಚನೆ ಮಾಡಿದ್ದೀರಿ ಎಂದು ಕೇಳಿದ್ದಾರೆ ಎಂದು ದಾನಿಶ್ ಸೇಠ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು