ಶುಕ್ರವಾರ, ಸೆಪ್ಟೆಂಬರ್ 20, 2019
28 °C

‘ದರ್ಬಾರ್‌’ಗೆ ಕಲ್ಲೇಟಿನ ಕಾಟ!

Published:
Updated:
Prajavani

‘ದರ್ಬಾರ್’ ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಬರೋಬ್ಬರಿ 25 ವರ್ಷಗಳ ಬಳಿಕ ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಸಿ ಕೊಂಡಿದ್ದರೆ, ನಾಯಕಿಯಾಗಿ ನಯನತಾರಾ ಇದ್ದಾರೆ. 

ರಜನಿ ಚಿತ್ರಗಳೆಂದರೆ ಅಭಿಮಾನಿಗಳಿಗೆ ಹಬ್ಬದೂಟವಿದ್ದಂತೆ. ರಜನಿ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಂಡಿರಬಹುದು ಎನ್ನುವ ಕುತೂಹಲ ಹಲವರದ್ದು. ಮುಂಬೈನ ಕಾಲೇಜೊಂದರಲ್ಲಿ ಚಿತ್ರೀಕರಣವಾಗುತ್ತಿದ್ದ ಸಮಯದಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರೀಕರಣದ ಕೆಲ ದೃಶ್ಯಗಳನ್ನು ಸಾಮಾಜಿಕ  ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಚಿತ್ರದ ದೃಶ್ಯಗಳು ಎಲ್ಲೂ ಲೀಕ್ ಆಗದಂತೆ ಎಚ್ಚರವಹಿಸಿದ್ದರೂ ಈ ರೀತಿ ‌ದೃಶ್ಯ ಸೋರಿಕೆಯಾಗುತ್ತಿರುವುದು ನಿರ್ದೇಶಕರ ಕೆಂಗಣ್ಣಿಗೆ ಕಾರಣವಾಗಿದೆ.  ವಿದ್ಯಾರ್ಥಿಗಳು ಫೋಟೊ ಮತ್ತು ವಿಡಿಯೊ ತೆಗೆಯದಂತೆ ಚಿತ್ರತಂಡ ನಿರ್ಬಂಧ ವಿಧಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಿಟ್ಟಿಗೆದ್ದು ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ. ಇದರಿಂದ ಬೇಸತ್ತ ಚಿತ್ರದ ನಿರ್ದೇಶಕ ಎ.ಆರ್. ಮುರುಗದಾಸ್ ಕಾಲೇಜಿನ ಆಡಳಿತ ಮಂಡಳಿಗೆ ದೂರು ಸಲ್ಲಿಸಿ, ಚಿತ್ರೀಕರಣದ ಸ್ಥಳವನ್ನು ಬದಲಿಸಿದರಂತೆ.

Post Comments (+)