ಪ್ರೇಮಿಗಳ ದಿನದಂದು ಗರ್ಲ್ಫ್ರೆಂಡ್ ಜೊತೆಗೆ ದೀಪ್ ಸಿಧು: ವೈರಲ್ ಆಯ್ತು ಫೋಟೊ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಸಾವಿಗೀಡಾದ ನಟ ದೀಪ್ ಸಿಧು ಅವರು ತಮ್ಮ ಗರ್ಲ್ಫ್ರೆಂಡ್ ಜೊತೆಗಿರುವ ಫೋಟೊವೊಂದು ವೈರಲ್ ಆಗಿದೆ.
ಸಿಧು, ಗರ್ಲ್ಫ್ರೆಂಡ್ ಹಾಗೂ ಪಂಜಾಬಿ ನಟಿ ರೀನಾ ರೈ ಅವರು ಪ್ರೇಮಿಗಳ ದಿನದಂದು ಇನ್ಸ್ಟಾಗ್ರಾಂ ಸ್ಟೋರಿಸ್ನಲ್ಲಿ ಈ ಫೋಟೊವನ್ನು ಹಂಚಿಕೊಂಡಿದ್ದರು.
ಅಪಘಾತ ನಡೆದಾಗ ಸಿಧು ಅವರ ಕಾರಿನಲ್ಲಿ ರೀನಾ ಸಹ ಇದ್ದರು. ರೀನಾ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Last Pic of @deepsidhu.official from Valentine's Day with girlfriend, @thisisreenarai 💔 They were traveling together when the accident happened.
.
.#deepsidhu #reenarai pic.twitter.com/xPH6kF5VbV— torontosanju (@torontosanju) February 15, 2022
ದೀಪ್ ಸಿಧು ಅವರು ಕಳೆದ ವರ್ಷದ ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿಯಾಗಿದ್ದರು.
ಹರಿಯಾಣದ ಸೋನಿಪತ್ನ ಪಿಪ್ಲಿ ಟೋಲ್ ಸಮೀಪ ದೀಪ್ ಸಿಧು ಅವರ ಕಾರು ಟ್ರಕ್ಗೆ ಡಿಕ್ಕಿ ಹೊಡೆದಿತ್ತು. ಆ ಅಪಘಾತದಲ್ಲಿ ಸಿಧು ಸಾವಿಗೀಡಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.