ಗುರುವಾರ , ಜೂನ್ 17, 2021
21 °C

ನ.21ರಂದು ದೀಪ್‌ವೀರ್ ಆರತಕ್ಷತೆ; ಬೆಂಗಳೂರಿಗೆ ಬಂದಿಳಿದ ನವಜೋಡಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದುವೆ ಸಂಭ್ರಮದಲ್ಲಿರುವ ನವಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಆರತಕ್ಷತೆಯ ನಿಮಿತ್ತ ಮುಂಬೈಯಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. 

ರಣವೀರ್ ಸಿಂಗ್ ಬಿಳಿ ಬಣ್ಣದ ಕುರ್ತಾ–ಪೈಜಾಮ ಧರಿಸಿದ್ದು, ದೀಪಿಕಾ ಪಡುಕೋಣೆ ತಿಳಿಕೆನೆ ಬಣ್ಣದ ಅನಾರ್ಕಲಿ ಬಟ್ಟೆ ತೊಟ್ಟು ಮಿಂಚುತ್ತಿದ್ದಾರೆ.

ಇವರ ಆರತಕ್ಷತೆ ‌ಕಾರ್ಯಕ್ರಮವು ನಗರದ ಲೀಲಾ ಪ್ಯಾಲೇಸ್‌ನಲ್ಲಿ ನ.21ರಂದು ಜರುಗಲಿದೆ. ಇಲ್ಲಿ ದೀಪಿಕಾ ಪಡುಕೋಣೆಯ ಕುಟುಂಬದ ಆಪ್ತರು, ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ.​

ಇನ್ನು ನ.28ರಂದು ಮುಂಬೈನಲ್ಲಿ ಆರತಕ್ಷತೆಯು ನಡೆಯಲಿದ್ದು, ಇಲ್ಲಿ ಬಾಲಿವುಡ್ ನಟರಿಗೆ, ಆಪ್ತರಿಗೆ ಆಹ್ವಾನಿಸಲಾಗಿದೆ.

ಈ ಜೋಡಿಯ ಮದುವೆ ನ.14, 15ರಂದು ಇಟಲಿಯ ಪ್ರಸಿದ್ಧ ಕೋಮ್ ಸರೋವರದ ಬಳಿ ಸಿಂಧಿ ಹಾಗೂ ಕೊಂಕಣಿ ಸಂಪ್ರದಾಯದ ಪ್ರಕಾರ ನಡೆದಿತ್ತು.

ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡ ದೀಪಿಕಾ

ತಮ್ಮ ಮದುವೆ ಸಂಭ್ರಮದ ಕೇವಲ ಎರಡು ಚಿತ್ರಗಳನ್ನು ಮಾತ್ರವೇ ಟ್ವಿಟರ್‌ನಲ್ಲಿ(ನವೆಂಬರ್‌ 15ರಂದು) ಹರಿಬಿಟ್ಟಿದ್ದ ದೀಪಿಕಾ ಇದೀಗ ಮತ್ತಷ್ಟು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು