ಮಂಗಳವಾರ, ಡಿಸೆಂಬರ್ 10, 2019
19 °C

ಇನ್‌ಸ್ಟಾದಲ್ಲಿ ಸೂಪರ್ ಡ್ರಗ್ ಬಗ್ಗೆ ಬರೆದುಕೊಂಡ ದೀಪಿಕಾ; ಯಾವುದು ಆ ಡ್ರಗ್?

Published:
Updated:
ದೀಪಿಕಾ ಪಡುಕೋಣೆ

ಮುಂಬೈ: ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಕನ್ನಡಕ್ಕಿಂತ ಜಾಸ್ತಿ ಸದ್ದು ಮಾಡಿದ್ದು, ಮಾಡುತ್ತಿರುವುದು ಬಾಲಿವುಡ್‌ನಲ್ಲಿ. ನಟ ರಣವೀರ್ ಸಿಂಗ್ ಅವರನ್ನು ವಿವಾಹವಾಗಿ ಸುಂದರ ಬದುಕನ್ನು ಕಟ್ಟಿಕೊಂಡಿರುವ ದೀಪಿಕಾ ಇದೀಗ ಡ್ರಗ್ ಕುರಿತು ಬರೆದುಕೊಂಡಿದ್ದಾರೆ. 

 
 
 
 

 
 
 
 
 
 
 
 
 

#nocaption #justpose @albertaferretti

A post shared by Deepika Padukone (@deepikapadukone) on

ನಟಿ ದೀಪಿಕಾ ಪಡುಕೋಣೆ ಮದುವೆಯ ಬಳಿಕ ಡ್ರಗ್‌ ಚಟಕ್ಕೆ ಒಳಗಾದರೇ? ಸೂಪರ್‌ ಡ್ರಗ್‌ ಎಂದು ಹೇಳಿಕೊಂಡಿರುವುದು ಯಾವುದಕ್ಕೆ? ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ದೀಪಿಕಾ ಇಷ್ಟಪಟ್ಟಿರುವ ಡ್ರಗ್ 'ರಣವೀರ್‌'.

ತಮ್ಮ ಇನ್‌ಸ್ಟಾಗ್ರಾಂನಲ್ಲಿ 'ಲವ್​ ಈಸ್​ ಎ ಸೂಪರ್​ ಪವರ್'​ ಎಂದು ಬರೆದ ಟೀ ಶರ್ಟ್​ ಧರಿಸಿರುವ ರಣವೀರ್​, ಆ ಚಿತ್ರವನ್ನು ಪೋಸ್ಟ್ ಮಾಡಿರುವ ದೀಪಿಕಾ; 'ನೀನು... ನನ್ನ ಸೂಪರ್​ ಡ್ರಗ್​' ಎಂದು ಕ್ಯಾಪ್ಶನ್ ನೀಡಿದ್ದಾರೆ. 

 
 
 
 

 
 
 
 
 
 
 
 
 

& you...my super drug!💝

A post shared by Deepika Padukone (@deepikapadukone) on

ಇತ್ತೀಚೆಗಷ್ಟೇ ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ದಂಪತಿ ತಿರುಪತಿ ಮತ್ತು ಅಮೃತಸರದಲ್ಲಿ ಆಚರಿಸಿಕೊಂಡಿದ್ದಾರೆ. ರಣವೀರ್‌ ಪೋಷಕರು, ಸಹೋದರಿ ರಿತಿಕಾ ಭವ್ನಾನಿ ಮತ್ತು ದೀಪಿಕಾ ಪಾಲಕರು ಮತ್ತು ತಂಗಿ ಸೇರಿ ಮೊದಲು ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ. 

ದೀಪಿಕಾ ಮತ್ತು ರಣವೀರ್ ಇಬ್ಬರು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರ ಜೀವನಾಧಾರಿತ ಸಿನಿಮಾ ಕಬೀರ್ ಖಾನ್ ಅವರ 83 ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Deepika Padukone (@deepikapadukone) on

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು