ಗುರುವಾರ , ಆಗಸ್ಟ್ 22, 2019
27 °C

ದೀಪಿಕಾ ಪಡುಕೋಣೆ ಗರ್ಭಿಣಿ?!

Published:
Updated:
Prajavani

ನಟಿ ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಸುದ್ದಿ ಸಿನಿಮಾ ಪ್ರಿಯರ ನಾಲಿಗೆಯ ತುದಿಯಲ್ಲಿ ಒಂದೆರಡು ದಿನಗಳಿಂದ ಓಡಾಡುತ್ತಿದೆ!

ದೀಪಿಕಾ ಮತ್ತು ಅವರ ಪತಿ ರಣವೀರ್ ಅವರು ತೀರಾ ಈಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಎಂದಿನಂತೆ ಛಾಯಾಗ್ರಾಹಕರಿಗೆ ಫೋಸ್ ಕೊಟ್ಟರು. ಅಲ್ಲಿ ಸೆರೆಸಿಕ್ಕ ದೃಶ್ಯಾವಳಿಯೊಂದರ ಪ್ರಕಾರ ದೀಪಿಕಾ ಅವರು ಗರ್ಭಿಣಿ. ಇದು ಸುದ್ದಿಯ ಸಾರ.

ಈ ದೃಶ್ಯಾವಳಿ ಈಗ ಯೂಟ್ಯೂಬ್‌ ಮೂಲಕ ದೀಪಿಕಾ ಅಭಿಮಾನಿಗಳ ಮೊಬೈಲ್‌ ಫೋನ್‌ಗಳನ್ನು ತಲುಪಿಯಾಗಿದೆ. ಸಹಸ್ರಾರು ಜನ ಇದನ್ನು ವೀಕ್ಷಿಸಿಯಾಗಿದೆ. ಯೂಟ್ಯೂಬ್‌ನ ಹಲವು ಚಾನೆಲ್‌ಗಳು ಇದನ್ನು ಪ್ರಸಾರ ಮಾಡಿವೆ. ಬಾಲಿವುಡ್‌ನ ಈ ಜೋಡಿ ಕಳೆದ ವರ್ಷ ವೈವಾಹಿಕ ಜೀವನ ಕಾಲಿರಿಸಿತ್ತು.

Post Comments (+)