ಭಾನುವಾರ, ಆಗಸ್ಟ್ 1, 2021
25 °C

ದೀಪಿಕಾ@34: ದೀಪಿಕಾ ಪಡುಕೋಣೆ ಪಾಲಿಗೆ ಇದು ಸ್ಪೆಷಲ್ ಹುಟ್ಟುಹಬ್ಬ ಯಾಕೆ ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಡುತ್ತಿರುವ ದೀಪಿಕಾ ತಮ್ಮ ಹುಟ್ಟುಹಬ್ಬವನ್ನು ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರೊಂದಿಗೆ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. 

ಈಗಾಗಲೇ ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ಹೊರಟಿರುವ ದೀಪಿಕಾ, ಲಖನೌನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಲಖನೌಗೆ ಭೇಟಿ ನೀಡುವ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರು ತಂದಿದ್ದ ಕೇಕ್ ಕತ್ತರಿಸಿದರು.

ತಮ್ಮ ಮುಂಬರುವ ಚಿತ್ರ ಛಪಾಕ್‌ ಆ್ಯಸಿಡ್‌ ದಾಳಿ ಸಂತ್ರಸ್ತೆಯೊಬ್ಬರ ಕುರಿತಾಗಿರುವುದರಿಂದ ತಮ್ಮ ಹುಟ್ಟುಹಬ್ಬವನ್ನು ಅವರೊಂದಿಗೆ ವಿಶೇಷವಾಗಿ ಆಚರಿಸಲು ನಿರ್ಧಾರ ಕೈಗೊಂಡಿದ್ದು, ಆ್ಯಸಿಡ್ ದಾಳಿಯಿಂದ ಬದುಕುಳಿದವರ ಲಖನೌ ಕೆಫೆಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆಯಲಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್‌ ಕಥೆಗೆ ದೀಪಿಕಾ–ರಣವೀರ್ ಜೋಡಿ

ವಿಡಿಯೋವೊಂದರಲ್ಲಿ ವಿಮಾನ ನಿಲ್ದಾಣಕ್ಕೆ ಕಾರು ಬಂದ ನಂತರ ರಣವೀರ್ ಇಳಿದು ಬಂದು ದೀಪಿಕಾರ ಕಾರಿನ ಬಾಗಿಲನ್ನು ತೆರೆಯುತ್ತಾರೆ. ಮತ್ತೊಂದು ವಿಡಿಯೋದಲ್ಲಿ ಅಭಿಮಾನಿಯೊಬ್ಬರು ಕೇಕ್ ತಂದು ಹುಟ್ಟುಹಬ್ಬದ ಶುಭಕೋರುತ್ತಾರೆ. ಆಗ ಕೇಕ್ ಕತ್ತರಿಸುವ ದೀಪಿಕಾ, ಅಭಿಮಾನಿ ಮತ್ತು ಪತಿ ರಣವೀರ್‌ಗೆ ಕೇಕ್ ತಿನ್ನಿಸಿ ಸಂಭ್ರಮಿಸುತ್ತಾರೆ. 

ಇನ್ನು ಶನಿವಾರವಷ್ಟೇ ಛಪಾಕ್ ಸಿನಿಮಾದ ಪಾತ್ರಧಾರಿಗಳು ಮತ್ತು ಸಿಬ್ಬಂದಿ ದೀಪಿಕಾ ಅವರ ಜನ್ಮದಿನದ ಮುನ್ನಾದಿನ ಹುಟ್ಟುಹಬ್ಬವನ್ನು ಆಚರಿಸಿ ದೀಪಿಕಾ ಆಶ್ಯರ್ಯಚಕಿತರಾಗುವಂತೆ ಮಾಡಿದ್ದರು. ಛಪಾಕ್ ಸಿನಿಮಾದ ನಿರ್ದೇಶಕಿ ಮೇಘನಾ ಗುಲ್ಜಾರ್, ಸಹ ನಟ ವಿಕ್ರಾಂತ್ ಮೆಸ್ಸಿ ಅವರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದರು. ಹುಟ್ಟುಹಬ್ಬದ ಪೂರ್ವದ ಸಂಭ್ರಮಾಚರಣೆಯಲ್ಲಿ ಮೇಘನಾ ದೀಪಿಕಾ ಮೇಲೆ ಗುಲಾಬಿ ದಳಗಳನ್ನು ಹಾಕಿದ್ದರು. 

ಛಪಾಕ್ ಸಿನಿಮಾವು ಈಗಾಗಲೇ ಟ್ರೇಲರ್‌ ಮತ್ತು ದೀಪಿಕಾರ ಲುಕ್‌ಗಳಿಗೆ ಸಾಕಷ್ಟು ಸದ್ದು ಮಾಡುತ್ತಿದ್ದು, ಜನವರಿ 10ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಸದ್ಯಕ್ಕೆ ದೀಪಿಕಾ ಪಡುಕೋಣೆ ಛಪಾಕ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು