ಸೋಮವಾರ, ಡಿಸೆಂಬರ್ 5, 2022
22 °C

ಮತ್ತೆ ಒಂದಾಗುತ್ತಿದ್ದಾರೆ ಧನುಷ್‌–ಐಶ್ವರ್ಯಾ?

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ತಮಿಳು ನಟ ಧನುಷ್‌ ಹಾಗೂ ರಜನಿಕಾಂತ್‌ ಪುತ್ರಿ ಐಶ್ವರ್ಯಾ ಪ್ರತ್ಯೇಕಗೊಂಡು 9 ತಿಂಗಳ ಬಳಿಕ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅನೇಕ ಧನುಷ್‌ ಅಭಿಮಾನಿಗಳು ಈ ಜೋಡಿ ಒಂದಾಗುತ್ತರೆಂದು ಇಬ್ಬರು ಚಿತ್ರವಿರುವ ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ.
ತಮಿಳು ನಟ ಧನುಷ್‌, 2004ರಲ್ಲಿ ರಜನಿಕಾಂತ್‌ ಹಿರಿಯ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದರು. ಈ ಜೋಡಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. 9 ತಿಂಗಳ ಹಿಂದೆ ಇಬ್ಬರೂ ಪ್ರತ್ಯೇಕಗೊಂಡಿರುವ ಕುರಿತಾಗಿ ಹೇಳಿಕೊಂಡಿದ್ದರು. ಅದಾದ ಬಳಿಕ ಉಭಯ ಕುಟುಂಬಗಳು ಅವರಿಬ್ಬರನ್ನು ಒಂದಾಗಿಸಲು ಯತ್ನಿಸುತ್ತಿರುವ ವಂದತಿ ಇತ್ತು.

ಕುಟುಂಬದವರ ನಿರಂತರ ಮನವೊಲಿಕೆಯಿಂದ ಇಬ್ಬರೂ ಒಟ್ಟಿಗಿರಲು ನಿರ್ಧರಿಸಿದ್ದಾರೆ. ಶೀಘ್ರದಲ್ಲಿಯೇ ಒಂದಾಗಿ ಜೀವನ ನಡೆಸಲಿದ್ದಾರೆ. ಪ್ರಸ್ತುತ ವಿಚ್ಛೇದನದ ಕುರಿತು ತಟಸ್ಥ ನಿಲುವು ತಳೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಇದರ ಬೆನ್ನಲ್ಲೇ ಅವರ ಅಭಿಮಾನಿಗಳು ಪೋಸ್ಟರ್‌ ಶೇರ್‌ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ‘ಧನುಷ್‌ ಮತ್ತು ಐಶ್ವರ್ಯಾ ವಿಚ್ಛೇದನ ಪಡೆಯುತ್ತಿಲ್ಲ ಎಂಬ ಸುದ್ದಿ ನಿಜವಾಗಿರಲಿ. ಇದೊಂದು ಉತ್ತಮ ಸುದ್ದಿಯಾಗಿರಲಿ’ಎಂದು ಧನುಷ್‌ ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.
ವರ್ಷದ ಪ್ರಾರಂಭದಲ್ಲಿ ಧನುಷ್‌ ಹಾಗೂ ಐಶ್ವರ್ಯಾ, ಇಬ್ಬರ ಖಾಸಗಿತನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪ್ರತ್ಯೇಕಗೊಳ್ಳುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು.

‘ಸ್ನೇಹಿತರಾಗಿ, ಜೋಡಿಯಾಗಿ, ಪಾಲಕರಾಗಿ 18 ವರ್ಷಗಳ ಪಯಣ ಕೊನೆಗೊಳ್ಳುತ್ತಿದೆ. ಸಾಕಷ್ಟು ಕಲಿತಿದ್ದೇವೆ, ಅರ್ಥೈಸಿಕೊಂಡಿದ್ದೇವೆ, ಹೊಂದಿಕೊಂಡಿದ್ದೇವೆ. ಇಂದು ಇಬ್ಬರೂ ಪ್ರತ್ಯೇಕ ದಾರಿಯಲ್ಲಿ ನಿಂತಿದ್ದೇವೆ’ ಎಂದು ಧನುಷ್‌ ಈ ಹಿಂದೆ ಹೇಳಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು