ಶನಿವಾರ, ಜುಲೈ 2, 2022
24 °C

ಮಾಜಿ ಪತ್ನಿ ಐಶ್ವರ್ಯಾಳನ್ನು 'ಸ್ನೇಹಿತೆ' ಎಂದು ಕರೆದ ಧನುಷ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ತಮಿಳು ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ 18 ವರ್ಷಗಳ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆದಿದ್ದರು.

ಈಗ ಮಾಜಿ ಪತ್ನಿಯನ್ನು 'ಸ್ನೇಹಿತೆ' ಎಂದು ಕರೆದಿರುವ ಧನುಷ್, ಆಕೆಯ ನಿರ್ದೇಶನದಿಂದ ಹೊರ ತಂದಿರುವ ನೂತನ ವಿಡಿಯೊಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: 

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್, 'ಪಯಣಿ' ಎಂಬ ಹೊಸ ಹಾಡನ್ನು ಗುರುವಾರ ಬಿಡುಗಡೆಗೊಳಿಸಿದ್ದಾರೆ.

 

 

 

'ನಿಮ್ಮ ವಿಡಿಯೊಗಾಗಿ ಅಭಿನಂದನೆಗಳು ನನ್ನ ಸ್ನೇಹಿತೆ, ದೇವರು ಆಶೀರ್ವದಿಸಲಿ' ಎಂದು ಟ್ವೀಟ್ ಮಾಡಿರುವ ಧನುಷ್ ಲಿಂಕ್ ಹಂಚಿದ್ದಾರೆ.

 

ಧನುಷ್ ಟ್ವೀಟ್‌ಗೆ ಐಶ್ವರ್ಯಾ ರಜನಿಕಾಂತ್ ಕೂಡಾ ಥಾಂಕ್ಸ್ ಹೇಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

 

 

 

ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಪಯಣಿ ಹಾಡು ನಾಲ್ಕು ಭಾಷೆಗಳಲ್ಲಿ (ತಮಿಳು, ತೆಲುಗು, ಮಲಯಾಳಂ, ಹಿಂದಿ) ಬಿಡುಗಡೆಗೊಂಡಿದೆ. ಈ ಹಾಡಿಗೆ ತಮಿಳಿನಲ್ಲಿ ಅನಿರುದ್ಧ್ ಕಂಠವನ್ನು ನೀಡಿದ್ದಾರೆ.

 

ಏತನ್ಮಧ್ಯೆ ಮಗಳ ನೂತನ ಪ್ರಾಜೆಕ್ಟ್‌ಗೆ ಶುಭ ಹಾರೈಸಿರುವ ರಜನಿಕಾಂತ್, ಒಂಬತ್ತು ವರ್ಷಗಳ ಬಳಿಕ ಪುತ್ರಿ ನಿರ್ದೇಶನಕ್ಕೆ ಮರಳಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು