ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು, ತೆಲುಗಿಗೆ ‘ಧೀರ ಸಾಮ್ರಾಟ್’ ಚಿತ್ರ

Published 15 ಮಾರ್ಚ್ 2024, 0:04 IST
Last Updated 15 ಮಾರ್ಚ್ 2024, 0:04 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ತೆರೆಕಂಡ  ‘ಧೀರ ಸಾಮ್ರಾಟ್’ ಚಿತ್ರ ತಮಿಳು, ತೆಲುಗಿನತ್ತ ಹೊರಟು ನಿಂತಿದೆ. ಪವನ್‌ಕುಮಾರ್ ನಿರ್ದೇಶಿಸಿರುವ ಚಿತ್ರ ಎರಡು ಭಾಷೆಗಳ ಡಬ್ಬಿಂಗ್ ರೈಟ್ಸ್ ಮಾರಾಟವಾಗಿದ್ದು, ಮಿಕ್ಕವು ಮಾತುಕತೆ ಹಂತದಲ್ಲಿದೆ ಎಂದಿದೆ ಚಿತ್ರತಂಡ. 

‘ಚಿತ್ರ 25 ದಿನಗಳನ್ನು ಪೂರೈಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಪ್ರದರ್ಶನ ಕಾಣುತ್ತಿದೆ. ಹೊಸಬರ ಚಿತ್ರಕ್ಕೆ ಸ್ಟಾರ್ ನಟರು ಪ್ರೋತ್ಸಾಹ ನೀಡಿದರೆ ಇನ್ನಷ್ಟು ಪ್ರಚಾರ ಸಿಗುತ್ತಿತ್ತು. ಧ್ರುವ ಸರ್ಜಾ, ಶ್ರೀಮುರಳಿ ನಮ್ಮ ಬೆಂಬಲಕ್ಕೆ ನಿಂತರು’ ಎಂದರು ನಿರ್ದೇಶಕರು. 

ರಾಕೇಶ್‌ ಬಿರಾದಾರ್, ಅದ್ವಿತಿ ಶೆಟ್ಟಿ ಅಭಿನಯದ ಚಿತ್ರವನ್ನು ತನ್ವಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿತ್ತು. ಶೋಭರಾಜ್, ನಾಗೇಂದ್ರ ಅರಸು, ಬಲ ರಾಜವಾಡಿ, ರಮೇಶ್‌ ಭಟ್ ಮುಂತಾದವರು ನಟಿಸಿದ್ದು, ರಾಘವ್‌ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT