ವರನಟ ಡಾ.ರಾಜ್ಕುಮಾರ್ ಅವರ ಮೊಮ್ಮಗ, ಪೂರ್ಣಿಮಾ ಹಾಗೂ ನಟ ರಾಮ್ಕುಮಾರ್ ಪುತ್ರ ಧೀರೇನ್ ರಾಮ್ಕುಮಾರ್ ಹೆಸರು ಬದಲಾಯಿಸಿಕೊಂಡಿದ್ದಾರೆ. ಧೀರೇನ್ ರಾಮ್ಕುಮಾರ್ ಅವರನ್ನು ಧೀರೇನ್ ಆರ್ ರಾಜ್ಕುಮಾರ್ ಆಗಿ ಕೆಆರ್ಜಿ ಸ್ಟೂಡಿಯೊಸ್ ಮರುಪರಿಚಯಿಸಿದೆ.

ಧೀರೇನ್ ಅವರ ಜನ್ಮದಿನದ ಅಂಗವಾಗಿ ಹೊಸ ಚಿತ್ರವನ್ನು ಕೂಡ ಕೆಆರ್ಜಿ ಸ್ಟೂಡಿಯೊಸ್ ಘೋಷಿಸಿದೆ. ಚಿತ್ರ ಕುರಿತು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದಿದೆ ಕೆಆರ್ಜಿ. ಈ ಹಿಂದೆ ತೆಲುಗಿನ ‘ಆರ್ಎಕ್ಸ್ 100’ ಸಿನಿಮಾದ ರಿಮೇಕ್ ಆಗಿದ್ದ ‘ಶಿವ 143’ ಎಂಬ ಸಿನಿಮಾದಲ್ಲಿ ಧೀರೇನ್ ನಟಿಸಿದ್ದರು. ಚಿತ್ರದಲ್ಲಿ ರಗಡ್ ಲುಕ್ನಲ್ಲಿ ಧೀರೇನ್ ಮಿಂಚಿದ್ದರು. ಇದೀಗ ಕೆಆರ್ಜಿ ಜೊತೆ ಕೈಜೋಡಿಸಿರುವ ಧೀರೇನ್ ಹೊಸ ಪ್ರಾಜೆಕ್ಟ್ಗೆ ಸಜ್ಜಾಗಿದ್ದಾರೆ.

ಸದ್ಯ ದಿಗಂತ್ ನಟನೆಯ ‘ಪೌಡರ್’ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿರುವ ಕೆಆರ್ಜಿ, ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಪ್ರಾಜೆಕ್ಟ್ ಪೂರ್ಣಗೊಂಡ ಬಳಿಕ ಧೀರೇನ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.