ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಜಿಎಮ್‌ ಆಡಿಯೊ ಬಿಡುಗಡೆ | ಕೇಕ್‌ ತಿನ್ನಿಸುವ ವೇಳೆ ನಟ ಯೋಗಿ ಬಾಬು ಕಿಚಾಯಿಸಿದ ಧೋನಿ

Published 15 ಜುಲೈ 2023, 12:31 IST
Last Updated 15 ಜುಲೈ 2023, 12:31 IST
ಅಕ್ಷರ ಗಾತ್ರ

ಕ್ರಿಕೆಟ್‌ ದಿಗ್ಗಜ ಎಂ.ಎಸ್‌. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ತಮಿಳು ಚಿತ್ರ 'ಎಲ್‌ಜಿಎಮ್‌' ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೊ ಬಿಡುಗಡೆಯಾಗಿದೆ.

ಎಲ್‌ಜಿಎಮ್‌ (ಲೆಟ್ಸ್‌ ಗೆಟ್‌ ಮ್ಯಾರೀಡ್‌) ಚಿತ್ರದ ಮೂಲಕ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸಿರುವ ಧೋನಿ, ಕೇಕ್‌ ಕತ್ತರಿಸುವ ಮೂಲಕ ಅದ್ಧೂರಿಯಾಗಿ ಚಿತ್ರದ ಆಡಿಯೊ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಹಲವಾರು ಕಲಾವಿದರು ಭಾಗವಹಿಸಿದ್ದರು.

ಕೇಕ್‌ ಕತ್ತರಿಸುವ ವೇಳೆ ನಟ ಯೋಗಿ ಬಾಬು ಮತ್ತು ಧೋನಿ ನಡುವೆ ತಮಾಷೆಯ ಸನ್ನಿವೇಶ ನಡೆದಿದೆ. ಕೇಕ್‌ ಕತ್ತರಿಸಿದ ಧೋನಿ ಕೇಕ್‌ ತುಂಡೊಂದನ್ನು ಎತ್ತಿಕೊಂಡರು. ಧೋನಿ ಅವರು ತನಗೆ ತಿನ್ನಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಯೋಗಿ ಬಾಬು ಅವರಿಗೆ ಕೇಕ್‌ ತಿನ್ನಿಸದೇ ಧೋನಿ ಅವರೇ ಅದನ್ನು ತಿಂದಿದ್ದರು.

ಇದರಿಂದ ಅವಮಾನಿತರಾದ ಯೋಗಿ ಬಾಬು ಧೋನಿಯವರೆಡೆಗೆ ಹತಾಶೆ ನೋಟ ಬೀರಿದ್ದಾರೆ. ಯೋಗಿ ಅವರ ಸ್ಥಿತಿ ಕಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲ ನಗು ಬೀರಿದ್ದಾರೆ. ನಂತರ ಯೋಗಿ ಬಾಬು ಅವರಿಗೆ ಮತ್ತೊಂದು ತುಂಡು ಕೇಕ್‌ ತಿನ್ನಿಸಿ ಯೋಗಿ ಅವರ ಮೊಗದಲ್ಲಿ ಧೋನಿ ನಗು ತರಿಸಿದ್ದಾರೆ.

ಧೋನಿ ಮತ್ತು ಯೋಗಿ ಬಾಬು ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧೋನಿಯವರ 'ಹ್ಯೂಮರ್ ಸೈಡ್‌' ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕ್ಯಾಪ್ಟನ್‌ ಕೂಲ್‌ ಎಲ್ಲಿದ್ದರೂ ಅಲ್ಲಿ ನಗೆ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.

ಎಲ್‌ಜಿಎಮ್‌ ಚಿತ್ರದಲ್ಲಿ ಯೋಗಿ ಬಾಬು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT