‘ಐ ಮಿಸ್ ಯು ಚಿರು..ನೀನಿರದೆ ಇರಲು ಸಾಧ್ಯವಾಗುತ್ತಿಲ್ಲ’. ಹೀಗೆ ತಮ್ಮ ಅಣ್ಣ, ದಿವಂಗತ ನಟ ಚಿರಂಜೀವಿ ಸರ್ಜಾ ಅವರನ್ನು ನೆನೆದು ನಟ ಧ್ರುವ ಸರ್ಜಾ ಅವರು ಭಾವುಕರಾಗಿದ್ದಾರೆ.
ಅಣ್ಣನ ಜೊತೆಗೆ ಕಳೆದ ಖುಷಿಯ, ಸಂಭ್ರಮದ ಕ್ಷಣಗಳ ಫೊಟೋ ಆಲ್ಬಂ ವಿಡಿಯೊವೊಂದನ್ನು ಧ್ರುವ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಇತ್ತೀಚೆಗೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪುತ್ರನ ನಾಮಕರಣದಲ್ಲಿ ಭಾಗವಹಿಸಿದ್ದ ಧ್ರುವ ಅಲ್ಲಿಯೂ ಅಣ್ಣನನ್ನು ನೆನೆದು ಭಾವುಕರಾಗಿದ್ದರು. ‘ಚಿರಂಜೀವಿ ಮಗನ ಹೆಸರು ರಾಯನ್ ರಾಜ್ ಸರ್ಜಾ. ಅವನಿಗೆ ಯುವರಾಜ ಎಂದು ಕೇವಲ ಹೆಸರಿಟ್ಟಿರುವುದಲ್ಲ. ಅವನು ಯುವರಾಜನ ರೀತಿಯೇ ಇರುತ್ತಾನೆ’ ಎಂದಿದ್ದರು. 2020ರ ಜೂನ್ 7ರಂದು ತೀವ್ರ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮೃತಪಟ್ಟಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.