ಮಂಗಳವಾರ, ಅಕ್ಟೋಬರ್ 26, 2021
23 °C

ಧ್ರುವ ಸರ್ಜಾ ಜನ್ಮದಿನ: ’ಮಾರ್ಟಿನ್‌’ ಸಿನಿಮಾದ ಪೋಸ್ಟರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧ್ರುವ ಸರ್ಜಾ ಅವರ ಜನ್ಮದಿನವಾದ ಇಂದು (ಅಕ್ಟೋಬರ್‌ 6) ’ಮಾರ್ಟಿನ್‌’ ಚಿತ್ರತಂಡ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡಿ 'ಆ್ಯಕ್ಷನ್‌ ಪ್ರಿನ್ಸ್‌'ಗೆ ಜನ್ಮದಿನದ ಶುಭಾಶಯ ಕೋರಿದೆ.

ಈ ವಿಶೇಷ ಪೋಸ್ಟರ್‌ನಲ್ಲಿ ಧ್ರುವ ಸರ್ಜಾ ವಿಭಿನ್ನ ರಗಡ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಜನ್ಮದಿನ ಆಚರಿಸಿಕೊಳ್ಳದೇ ಇರುವ ಬಗ್ಗೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ಪ್ರಕಟಿಸಿದ್ದರು. ಅಣ್ಣ ಚಿರಂಜೀವಿ ಸರ್ಜಾ ಅಗಲಿಕೆ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಧ್ರುವ ಈ ನಿರ್ಧಾರ ಮಾಡಿದ್ದಾರೆ.

ಸಿನಿಮಾರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಧ್ರುವಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ. 

ಎ.ಪಿ.ಅರ್ಜುನ್‌ ನಿರ್ದೇಶನದ ‘ಮಾರ್ಟಿನ್‌’ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಅರ್ಜುನ್‌ ನಿರ್ದೇಶನದ ‘ಅದ್ದೂರಿ’ ಮುಖಾಂತರ ಧ್ರುವ 2012ರಲ್ಲಿ ಚಂದನವನಕ್ಕೆ ಪ್ರವೇಶಿಸಿದ್ದರು. ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವ ‘ಮಾರ್ಟಿನ್‌’ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು