ಬುಧವಾರ, ಜನವರಿ 29, 2020
30 °C

ಪ್ರಭಾಸ್‌ ವಿದೇಶ ಪ್ರಯಾಣ‘ಜಾನ್‌’ ಚಿತ್ರೀಕರಣ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಭಾಸ್

‘ಬಾಹುಬಲಿ’ ಸಿನಿಮಾದ ಅಮೋಘ ಯಶಸ್ಸಿನ ನಂತರ ಪ್ರಭಾಸ್‌ ‘ಸಾಹೋ’ ಚಿತ್ರದಲ್ಲಿ ನಟಿಸಿದ್ದರು. ಸುಜೀತ್‌ ನಿರ್ದೇಶನದ ಆ ಚಿತ್ರವು ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿರಲಿಲ್ಲ. ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಚಿತ್ರದ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದ್ದವು. 

ಈ ಚಿತ್ರದ ಬಳಿಕ ಪ್ರಭಾಸ್‌ ಈಗ ‘ಜಾನ್‌’ ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ. ಈ ಚಿತ್ರವನ್ನು ರಾಧಾಕೃಷ್ಣ ಕುಮಾರ್‌ ನಿರ್ದೇಶಿಸುತ್ತಿದ್ದು, ಈ ಚಿತ್ರದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ.

‘ಸಾಹೋ’  ಪ್ರಚಾರ ಸಮಯದಲ್ಲಿಯೇ ಪ್ರಭಾಸ್‌ ‘ಜಾನ್‌’ ಚಿತ್ರದ ಸಿದ್ಧತೆಗಳು ಶೇಕಡ 20ರಷ್ಟು ಮುಗಿದಿದೆ ಎಂದು ಹೇಳಿದ್ದರು. ಈ ಚಿತ್ರದ ಚಿತ್ರೀಕರಣ ಡಿಸೆಂಬರ್‌ ತಿಂಗಳಲ್ಲಿ ಆರಂಭವಾಗಬೇಕಿತ್ತು. ಈ ಚಿತ್ರದ ಚಿತ್ರೀಕರಣಕ್ಕಾಗಿ ನಿರ್ಮಾಪಕರು ಹೈದಾರಾಬಾದ್‌ನಲ್ಲಿ ಅದ್ದೂರಿ ಸೆಟ್‌ ಕೂಡ ಹಾಕಿದ್ದಾರೆ. ಆದರೆ ಪ್ರಭಾಸ್‌ ವಿಶ್ರಾಂತಿಗಾಗಿ ವಿದೇಶ ಪ್ರಯಾಣದಲ್ಲಿರುವುದರಿಂದ ಈ ಚಿತ್ರದ ಚಿತ್ರೀಕರಣವನ್ನು ಮುಂದೂಡಲಾಗಿದೆ. ಬಹುಶಃ ಜನವರಿ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಪ್ರಭಾಸ್‌ ಯುರೋಪ್‌ ಪ್ರವಾಸದಲ್ಲಿದ್ದು, ಅಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಅವರು ವಿದೇಶದಿಂದ ಬಂದ ಬಳಿಕ ಹೊಸ ಚಿತ್ರದ ಕೆಲಸ ಶುರುವಾಗಲಿದೆ. ಹಾಗಾಗಿ ಈ ಚಿತ್ರದ ನಾಯಕಿ ಪೂಜಾ ಹೆಗ್ಡೆ ಕೂಡ ಮುಂಬೈನ ತಮ್ಮ ಮನೆಯಲ್ಲಿದ್ದಾರೆ.

‘ಸಾಹೋ’ ಚಿತ್ರದ ಫಲಿತಾಂಶ ಬಂದ ಬಳಿಕ, ಹೊಸ ಚಿತ್ರ ‘ಜಾನ್‌’ ಚಿತ್ರಕತೆಯಲ್ಲಿ ಕೊಂಚ ಬದಲಾವಣೆ ಮಾಡುವಂತೆ ಪ್ರಭಾಸ್‌, ನಿರ್ದೇಶಕರ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂಬ ಗಾಳಿಸುದ್ದಿ ಇದೆ. 

‘ಸಾಹೋ ಚಿತ್ರವು ತೆಲುಗು ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ, ಆದರೆ ಹಿಂದಿ ಮಾರ್ಕೆಟ್‌ನಲ್ಲಿ ಭರ್ಜರಿ ಲಾಭ ಗಳಿಸಿತ್ತು. ಹಿಂದೆ ಭಾಷೆಯಲ್ಲಿಯೇ ₹100 ಕೋಟಿ ಗಳಿಕೆ ಮಾಡಿದೆ. ಆದರೆ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆ  ಬಗ್ಗೆ ಪ್ರಭಾಸ್‌ ಅವರಿಗೆ ಹೆಚ್ಚು ಒಲವಿಲ್ಲ. ತೆಲುಗು ಅಥವಾ ದಕ್ಷಿಣ ಭಾರತದ ಪ್ರೇಕ್ಷಕರಿಗೆ ಆಪ್ತವಾಗುವಂತೆ ಚಿತ್ರಕತೆಯಲ್ಲಿ ಬದಲಾವಣೆ ತರಲು ತಿಳಿಸಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಜಾನ್‌ ಚಿತ್ರಕತೆಯು 1970ರ ಅವಧಿಯ ಪ್ರೇಮಕತೆಯನ್ನು ಹೊಂದಿದೆ.

ಪ್ರತಿಕ್ರಿಯಿಸಿ (+)