ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಟ್ಟಾಗಿ ಮದುವೆಯಾದ್ರಾ ನಟಿ ಸಾಯಿ ಪಲ್ಲವಿ? ಇಲ್ಲಿದೆ ಚಿತ್ರದ ಅಸಲಿ ಕಥೆ

Published 21 ಸೆಪ್ಟೆಂಬರ್ 2023, 13:59 IST
Last Updated 21 ಸೆಪ್ಟೆಂಬರ್ 2023, 13:59 IST
ಅಕ್ಷರ ಗಾತ್ರ

ಬಹುಭಾಷಾ ನಟಿ ಸಾಯಿ ಪಲ್ಲವಿ ಮದುವೆ ವಿಚಾರವಾಗಿ ಇದೀಗ ಗುಸುಗುಸು ಶುರುವಾಗಿದೆ. ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಮತ್ತು ಸಾಯಿ ಪಲ್ಲವಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು ಇದಕ್ಕೆ ಪುಷ್ಟಿ ನೀಡುವಂತಿವೆ.

ನಿಜಕ್ಕೂ ಸಾಯಿ ಪಲ್ಲವಿ ಮದುವೆಯಾದ್ರಾ? ಸಾಯಿ ಪಲ್ಲವಿ ಮತ್ತು ರಾಜ್‌ಕುಮಾರ್‌ ಅವರು ಕೊರಳಿಗೆ ಹಾರ ಹಾಕಿಕೊಂಡು ಒಟ್ಟಿಗೆ ನಿಂತಿರುವುದ್ಯಾಕೆ? ಮದುವೆಯಾಗಿದಾದ್ದರು ಎಲ್ಲಿ? ಯಾವಾಗ? ಈ ಬಗ್ಗೆ ಮೊದಲೇ ಯಾಕೆ ತಿಳಿಸಿಲ್ಲ? ಎಂದು ಅವರ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೆರೆದಿದ್ದಾರೆ.

ಅಸಲಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋದ ಹಿಂದಿನ ಕಥೆ ಬೇರೆಯೇ ಇದೆ. ಇದು ಸಾಯಿ ಪಲ್ಲವಿ ಅವರ ಮದುವೆಯ ಫೋಟೋ ಅಲ್ಲ. ಬದಲಾಗಿ ರಾಜ್‌ಕುಮಾರ್‌ ಪೆರಿಯಸಾಮಿ ಅವರ ಮುಂದಿನ ಚಿತ್ರ ‘ಎಸ್‌ಕೆ 21’ರ ಮುಹೂರ್ತದ ಸಮಯದಲ್ಲಿ ತೆಗೆದ ಫೋಟೊ. ಪೂಜೆಯ ವೇಳೆ ಇಬ್ಬರು ಹಾರ ಹಾಕಿಕೊಂಡಿದ್ದು, ಒಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು.

ಇದೇ ಮೇ 9ರಂದು ಸಾಯಿ ಪಲ್ಲವಿಯವರ ಹುಟ್ಟುಹಬ್ಬಕ್ಕೆ ಶುಭಕೋರುವ ಸಂದರ್ಭ ರಾಜ್‌ಕುಮಾರ್ ಅವರು ಈ ಫೋಟೊಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೇ ಫೋಟೋಗಳನ್ನು ಹಂಚಿಕೊಂಡ ಕೆಲವರು ಇವರಿಬ್ಬರು ಮದುವೆಯಾಗಿದ್ದಾರೆ ಎಂದು ಗುಲ್ಲೆಬ್ಬಿಸಿದ್ದಾರೆ.

‘ಎಸ್‌ಕೆ 21’ ಚಿತ್ರದಲ್ಲಿ ಸಾಯಿ ಪಲ್ಲವಿಯರಿಗೆ ನಟ ಶಿವಕಾರ್ತಿಕೇಯನ್‌ ಜೊತೆಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT