ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಂಜೀವಿ ಮನೆಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್: ಹೊರ ಬಿದ್ದ ಸುದ್ದಿ ಏನು?

Last Updated 16 ಅಕ್ಟೋಬರ್ 2021, 13:14 IST
ಅಕ್ಷರ ಗಾತ್ರ

ಬೆಂಗಳೂರು: ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಹೈದರಾಬಾದ್‌ನಲ್ಲಿ ನಿನ್ನೆ ಭೇಟಿಯಾಗಿದ್ದಾರೆ.

ವಿಜಯದಶಮಿ ಪ್ರಯುಕ್ತ ಚಿರಂಜೀವಿ ಅವರ ಆಹ್ವಾನದ ಮೇಲೆ ಅವರ ಮೆನೆಗೆ ತೆರಳಿದ್ದ ಪ್ರಶಾಂತ್ ನೀಲ್, ಚಿರಂಜೀವಿ ಜೊತೆ ಭೋಜನ ಸವಿದು, ಉಭಯ ಕುಶಲೋಪರಿ ನಡೆಸಿದ್ದಾರೆ. ಈ ವೇಳೆ ನಿರ್ಮಾಪಕ ಡಿವಿವಿ ಧನ್ಯಾಪ್ರಸಾದ್, ನಟ ರಾಮ್‌ ಚರಣ್ ಕೂಡ ಹಾಜರಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್ ಅವರು, ಚಿರಂಜೀವಿ ಅವರ ಆಹ್ವಾನದ ಮೇಲೆ ಅವರ ಮೆನೆಗೆ ತೆರಳಿದ್ದೆ. ಇದೊಂದು ಅದ್ಭುತ ಭೇಟಿಯಾಗಿತ್ತು. ಅಲ್ಲದೇ ಚಿರಂಜೀವಿ ಅವರನ್ನು ಭೇಟಿಯಾಗಬೇಕು ಎಂಬುದು ನನ್ನ ಬಾಲ್ಯದ ಕನಸು ಕೂಡ ಆಗಿತ್ತು ಎಂದಿದ್ದಾರೆ.‌

ಪ್ರಶಾಂತ್ ಅವರು ಕೆಜಿಎಫ್‌ ಚಾಪ್ಟರ್ 2 ಮುಗಿಸಿದ್ದು ಅದರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಸದ್ಯ ಅವರು ಪ್ರಭಾಸ್‌ ಅಭಿನಯದ 'ಸಲಾರ್‌'ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿರಂಜೀವಿ ಅವರ ಈ ಭೇಟಿ ಹಲವು ಊಹಾಪೋಹಗಳಿಗೂ ಕಾರಣವಾಗಿದ್ದು, ರಾಮ್‌ ಚರಣ್‌ಗೆ ಪ್ರಶಾಂತ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.

ರಾಮಚರಣ್ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಗಮನಹರಿಸುತ್ತಿದ್ದು, ಅವರ ಆರ್‌ಆರ್‌ಆರ್‌ ಬಿಡುಗಡೆಗೆ ಸಿದ್ದವಾಗಿದೆ. ಈಗ ಎಸ್ ಶಂಕರ್ ನಿರ್ದೇಶನದಲ್ಲಿ ಆರ್‌ಸಿ15 ಎಂಬ ಮೆಗಾ ಪ್ರಾಜೆಕ್ಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಡಿವಿವಿಸಂಸ್ಥೆಯಡಿಯೇ ಇನ್ನೊಂದು ಸಿನಿಮಾಕ್ಕೂ ರಾಮ್‌ಚರಣ್ ಸಹಿ ಹಾಕಿದ್ದಾರೆ.ಪ್ರಶಾಂತ್ ನೀಲ್ ಅವರು ರಾಮ್‌ ಚರಣ್‌ಗೆ'ಆರ್‌ಸಿ 17' ಸಿನಿಮಾ ಪ್ರೊಜೆಕ್ಟ್ ಆರಂಭಿಸಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT