ಶನಿವಾರ, ಆಗಸ್ಟ್ 13, 2022
26 °C

ಬಿಕಿನಿ ಧರಿಸಿ ಬೀಚ್‌ನಲ್ಲಿರುವ ಹಳೆಯ ಫೋಟೊ ಪೋಸ್ಟ್ ಮಾಡಿದ ದಿಶಾ ಪಟಾನಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Disha Patani

ಬೆಂಗಳೂರು: ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸದಾ ಫೋಟೊ ಮತ್ತು ವಿಡಿಯೊ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.

ದಿಶಾ, ಈ ಬಾರಿ ಬಿಕಿನಿ ಧರಿಸಿ ಬೀಚ್‌ನಲ್ಲಿ ನಿಂತಿರುವ ಹಳೆಯ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಲಾಕ್‌ಡೌನ್ ಇರುವುದರಿಂದ, ಹೊರಗಡೆ ಸುತ್ತಾಡುವುದನ್ನು ಮತ್ತು ಬೀಚ್‌ಗೆ ಹೋಗುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ದಿಶಾ ಹೇಳಿದ್ದಾರೆ.

ಕೈಯಲ್ಲಿ ಕಪ್ಪೆಚಿಪ್ಪು ಮತ್ತು ಶಂಖವನ್ನು ಹಿಡಿದುಕೊಂಡಿರುವ ದಿಶಾ ಪಟಾನಿ ಚಿತ್ರಕ್ಕೆ 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೂರಾರು ಜನರು ಕಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಕಮೆಂಟ್ ಮಾಡಿ, ನೀವು ಧರಿಸಿರುವ ಬಟ್ಟೆಯಲ್ಲಿನ ಪ್ರಿಂಟ್, ಟೈಗರ್ ಶ್ರಾಫ್ ಅವರನ್ನು ನೆನಪಿಸುತ್ತಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು