ಭಾನುವಾರ, ಜೂನ್ 26, 2022
21 °C

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ‘ಡಾಕ್ಟರ್ ಸ್ಟ್ರೇಂಜ್‘ ನಟಿಗೆ 13 ವರ್ಷ ಜೈಲು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

IMAGE COURTESY: AGENCIES

ಬೆಂಗಳೂರು: 13 ವರ್ಷದ ಬಾಲಕಿ ಮೇಲೆ ನಿರಂತರ ಮೂರು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ ನಟಿ ಝಾರಾ ಫಿಯಾನ್ ಅವರಿಗೆ 8 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.

ಮಾರ್ವೆಲ್ ಸರಣಿಯ 2016ರಲ್ಲಿ ತೆರೆಕಂಡಿದ್ದ ‘ಡಾಕ್ಟರ್ ಸ್ಟ್ರೇಂಜ್‘ ಸಿನಿಮಾದಲ್ಲಿ ಝಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಝಾರಾ ಮತ್ತು ಅವರ ಪತಿ ವಿಕ್ಟರ್ ಮಾರ್ಕ್ ವಿರುದ್ಧ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 14 ಪ್ರಕರಣ ದಾಖಲಾಗಿವೆ.

ಝಾರಾ ಅವರು ಮಾರ್ವೆಲ್ ಸರಣಿ ಮಾತ್ರವಲ್ಲದೆ, ಟ್ರೈಬಲ್ ಗೆಟ್ ಔಟ್ ಅಲೈವ್, ಆಕ್ಸಿಡೆಂಟ್ ಮ್ಯಾನ್ 2 ಚಿತ್ರದಲ್ಲೂ ನಟಿಸಿದ್ದಾರೆ.

15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವೊಂದರಲ್ಲಿ ಝಾರಾ ಅವರ ಪತಿ ವಿಕ್ಟರ್‌ಗೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು