ಭಾನುವಾರ, ಸೆಪ್ಟೆಂಬರ್ 26, 2021
21 °C

ಸೆಟ್ಟೇರಲಿದ್ದಾನೆ ಕಾಲಿವುಡ್‌ನ ‘ಡಾನ್‌’ ಶಿವಕಾರ್ತಿಕೇಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್‌ನಲ್ಲಿ ‘ಡಾನ್‌’ ಆಗಿ ಬರುತ್ತಿದ್ದಾರೆ ಶಿವಕಾರ್ತಿಕೇಯನ್‌. ಕಾಲೇಜು ಜೀವನದ ಕಥಾ ಹಂದರವುಳ್ಳ ಮನರಂಜನಾತ್ಮಕ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಲೈಕಾ ಪ್ರೊಡಕ್ಷನ್ಸ್‌ ಮತ್ತು ಶಿವಕಾರ್ತಿಕೇಯನ್‌ ಅವರ ಎಸ್‌ಕೆ ಪ್ರೊಡಕ್ಷನ್ಸ್‌ ಜಂಟಿಯಾಗಿ ‘ಡಾನ್‌’ ಚಿತ್ರವನ್ನು ನಿರ್ಮಿಸುತ್ತಿವೆ.ಸಿಬಿ ಚಕ್ರವರ್ತಿ ಈ ಚಿತ್ರದ ನಿರ್ದೇಶಕರು. ಅನಿರುದ್ಧ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಸಿಬಿ ಚಕ್ರವರ್ತಿ ಅವರು ನಿರ್ದೇಶಕ ಅಟ್ಲೀ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು. ಇದು ಸಿಬಿ ನಿರ್ದೇಶನದ ಮೊದಲ ಚಿತ್ರ. ಚಿತ್ರ ಸೆಟ್ಟೇರಿಸುವ ಖುಷಿಯನ್ನು ಸಿಬಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಸಿಬಿ ಅವರು ‘ಬಿಟ್ಟು’ ಹೆಸರಿನ ಪ್ರಾಯೋಗಿಕ ಚಿತ್ರವನ್ನೂ ನಿರ್ಮಿಸಿದ್ದರು. ತಲಪಾಟಿ ವಿಜಯ್‌ ಮತ್ತು ಎಸ್‌ಜೆ ಸೂರಯ್ಯ ಅವರು ಈ ಚಿತ್ರಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು