ಶುಕ್ರವಾರ, ನವೆಂಬರ್ 22, 2019
23 °C

ಮತ್ತೊಬ್ಬ ಸ್ಟಾರ್‌ ನಟನ ಮಗ ಬಾಲಿವುಡ್‌ಗೆ

Published:
Updated:
Prajavani

ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಸ್ಟಾರ್‌ ನಟ, ನಟಿಯರ ಮಕ್ಕಳನ್ನು ಒಬ್ಬೊಬ್ಬರನ್ನಾಗಿಯೇ ಹೊಸ ಹೊಸ ಸಿನಿಮಾಗಳ ಮೂಲಕ ಬಾಲಿವುಡ್‌ಗೆ ಕರೆತರುತ್ತಿದ್ದಾರೆ. ಈಗ ತಮ್ಮ ಬಹುನಿರೀಕ್ಷಿತ ‘ದೋಸ್ತಾನಾ 2’ ಚಿತ್ರದಲ್ಲಿ ಮತ್ತೊಬ್ಬ ನಟಿಯ ಮಗನನ್ನು ಬಾಲಿವುಡ್‌ಗೆ ಪರಿಚಯಿಸಲಿದ್ದಾರೆ.

ವಿಂಧು ಧಾರಾ ಸಿಂಗ್‌ ಹಾಗೂ ನಟಿ ಫರ್ಹಾ ನಾಜ್‌ ಅವರ ಮಗ ಫತೇ ರಾಂಧವ ಅವರು ಸದ್ಯದಲ್ಲೇ ಬಾಲಿವುಡ್‌ಗೆ ಕಾಲಿಡಲಿದ್ದಾರೆ.

ಈ ಚಿತ್ರದಲ್ಲಿ ನಟಿ ಜಾಹ್ನವಿ ಕಪೂರ್ ಹಾಗೂ ಕಾರ್ತಿಕ್‌ ಆರ್ಯನ್‌ ನಟಿಸುತ್ತಿದ್ದಾರೆ.  ಈ ಚಿತ್ರದಲ್ಲಿ ಫತೇ ರಾಂಧವ ನಟಿಸುತ್ತಿರುವುದು ಖಚಿತವಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ರಾಂಧವ ನಟನೆ ಬಗ್ಗೆ ತರಬೇತಿ ಪಡೆಯುತ್ತಿದ್ದ ಎಂದು ಹೇಳಿರುವ ಅವರ ತಂದೆ ವಿಂಧು, ಮಗನ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. 

 ಈ ಚಿತ್ರದಲ್ಲಿ ರಾಂಧವ ಜೊತೆ ಮತ್ತೊಬ್ಬ ನಟ ಕೂಡ ಬಾಲಿವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ. ಕಿರುತೆರೆ ನಟ ಲಕ್ಷ್ಯ ‘ದೋಸ್ತಾನಾ 2’ ಚಿತ್ರದಲ್ಲಿ ಮೂರನೇ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ.

ಪ್ರತಿಕ್ರಿಯಿಸಿ (+)