ಗುರುವಾರ , ಏಪ್ರಿಲ್ 9, 2020
19 °C

ರಾಬರ್ಟ್‌ | 'ದೋಸ್ತಾ ಕಣೊ' ಹಾಡಿಗೆ ಸಿನಿರಸಿಕರು ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದರ್ಶನ್‌ ಅಭಿನಯ ಮತ್ತು ತರುಣ್‌ ಕಿಶೋರ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್‌’ ಚಿತ್ರದ ಮತ್ತೊಂದು ಲಿರಿಕಲ್‌ ಹಾಡು ಬಿಡುಗಡೆಯಾಗಿದ್ದು, ಸ್ನೇಹ ಸಂಬಂಧದ ಮಹತ್ವ ಸಾರುವ ‘ದೋಸ್ತಾ ಕಣೊ’ ಹಾಡು ಸಿನಿ ರಸಿಕರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ.

ಬೈದು ಬುದ್ದಿ ಹೇಳೋ ಫಾದರ್‌ ‌ಕಾಣೋ ಇವನು

ನೋವಲ್ಲಿ ಕಣ್ಣೀರು ಒರೆಸೊ ಮದರ್ರು ಕಾಣೋ

ಜೀವನಕ್ಕೆ ಪಾಠೋ ಹೇಳೊ ಟೀಚರ್‌ ಕಾಣೋ ಇವನು

ಲೈಫ್‌ ಪಾರ್ಟ್‌ನರ್‌ಗಿಂತ ಕ್ಲೋಸು ಕಾಣೋ

ರಕ್ತ ಸಂಬಂಧನೂ ಮೀರಿದ ಬಂಧು ಇವನು

ಜಾತಿಮತಕ್ಕಿಂತ ತುಂಬಾ ದೊಡ್ಡವನು ಇವನು

ಎಲ್ಲರ ಪ್ರೀತಿಗಿಂತ ತುಂಬಾ ಜಾಸ್ತಿ ಪ್ರೀತಿ ನೀಡೋನ್‌ ದೋಸ್ತಾ ಕಣೋ.... ಬ್ರೊ ಲವ್‌ ಯು

ಈ ಹಾಡು ಯೂಟ್ಯೂಬ್‌ನಲ್ಲೂ ಸಖತ್‌ ಸದ್ದು ಮಾಡುತ್ತಿದೆ. ‘ಬಹದ್ದೂರ್‌’ ಖ್ಯಾತಿಯ ಚೇತನಕ್‌ಕುಮಾರ್‌ ಸಾಹಿತ್ಯ ರಚಿಸಿರುವ ಈ ಗೀತೆಯನ್ನು ಗಾಯಕರಾದ ವಿಜಯ ಪ್ರಕಾಶ್‌ ಮತ್ತು ಹೇಮಂತ್‌ ಹಾಡಿದ್ದಾರೆ. 40 ನಿಮಿಷಗಳ ಲಿರಿಕಲ್‌ ಸಾಂಗ್‌ ಅನ್ನು ಈವರೆಗೂ 4.29 ಲಕ್ಷ ವೀಕ್ಷಕರು ಆಲಿಸಿದ್ದರು. ಹಾಡಿನ ಸಾಹಿತ್ಯವು ಮತ್ತು ವಿಜಯ್‌– ಹೇಮಂತ್‌ ಜೋಡಿಯ ಕಂಠ ಸಿರಿಯೂ ಸಿನಿರಸಿಕರನ್ನು ಮೋಡಿ ಮಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ‌ಈ ಹಾಡಿನ ಬಗ್ಗೆ ಅಪಾರ ಪ್ರಶಂಸೆಗಳು ವ್ಯಕ್ತವಾಗಿವೆ. ಕೆಲ ನೆಟ್ಟಿಗರು ಈ ಹಾಡಿನಲ್ಲಿ ದಚ್ಚು ಮತ್ತು ಕಿಚ್ಚ ಇದ್ದಿದ್ರೆ ರೇಂಜೇ ಬೇರೆ ಇರುತ್ತಿತ್ತು ಎನ್ನುವ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಂಬರೀಷ್‌ ಮತ್ತು ವಿಷ್ಣುವರ್ಧನ್‌ ಅವರ ಜೀವದ ಗೆಳೆತನ ಬಿಂಬಿಸುವ ‘ಕುಚುಕು ಕುಚುಕು’ ಹಾಡನ್ನು ನೆನಪಿಗೆ ತರುವಂತಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರಾಬರ್ಟ್‌ ಚಿತ್ರದ ‘ಜೈಶ್ರೀರಾಮ್‌’ ಹಾಡು ಕೂಡ ಸಿನಿರಸಿಕರ ಮನಗೆದ್ದಿತ್ತು. ಈ ಹಾಡಿನಲ್ಲಿರುವ ಸ್ಟೆಪ್‌ ಟಿಕ್‌ಟಾಕ್‌ನಲ್ಲಿ ಟ್ರೆಂಡ್‌ ಹುಟ್ಟು ಹಾಕಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)