ಸೋಮವಾರ, ಆಗಸ್ಟ್ 15, 2022
23 °C

ಡ್ರಗ್ ಪೆಡ್ಲರ್‌ ಶೇಖ್ ಫೈಜಲ್‍ ಪರಿಚಯವೇ ಇಲ್ಲ ಎಂದ ನಟಿ ಐಂದ್ರಿತಾ ರೇ​

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಡ್ರಗ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಶೇಖ್ ಫೈಜಲ್‍ಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ನಟಿ ಐಂದ್ರಿತಾ ರೇ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದ ಫೈಜಲ್, ಚಿತ್ರನಟಿಯರಿಗೆ ಕ್ಯಾಸಿನೊ ಪಾರ್ಟಿಗಳಿಗೆ ಆಹ್ವಾನ ನೀಡುತ್ತಿದ್ದ. ಕ್ಯಾಸಿನೊ ಪಾರ್ಟಿಗೆ ಕನ್ನಡ ನಟಿ ಐಂದ್ರಿತಾ ರೇ ಅವರಿಗೆ ಆಹ್ವಾನ ನೀಡಿರುವ ವಿಡಿಯೊ ಲಭ್ಯವಾಗಿದ್ದು, ‘ಈದ್ ಆಚರಣೆಗೆ ಕೊಲಂಬೊದ ಕ್ಯಾಸಿನೊಗೆ ಬರುತ್ತಿದ್ದೇನೆ. ಇದಕ್ಕೆ ಆಹ್ವಾನ ನೀಡಿರುವ ಶೇಖ್ ಫೈಜಲ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಐಂದ್ರಿತಾ, ‘ಅದು ಮೂರು ವರ್ಷಗಳ ಹಿಂದಿನ ವಿಡಿಯೊ. ಸಿನಿಮಾವೊಂದರ ಪ್ರಚಾರಕ್ಕಾಗಿ ಶ್ರೀಲಂಕಾಗೆ ಹೋಗಿದ್ದೆ. ನಟಿ ಆಗಿರುವ ಕಾರಣಕ್ಕೆ ಪಾರ್ಟಿ ಬಗ್ಗೆ ಮಾತನಾಡಿಸಿದ್ದರು. ಆದರೆ, ಫೈಜಲ್ ನನಗೆ ವೈಯಕ್ತಿಕ ಪರಿಚಯ ಇಲ್ಲ. ಅವರಿಗೂ ನನಗೂ ಸಂಬಂಧವಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ... ಫೈಜಲ್ ಜತೆಗಿನ ಜಮೀರ್‌ ಸಂಬಂಧ ತನಿಖೆಯಾಗಲಿ: ಸಂಬರಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು