ಗುರುವಾರ , ಅಕ್ಟೋಬರ್ 22, 2020
21 °C

ಸಿನಿಮಾದವರಷ್ಟೇ ಏಕೆ ಗುರಿ: ನಟ ಚೇತನ್‌ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ರಾಜಕಾರಣಿ, ಉದ್ಯಮಿ ಮತ್ತು ಅಧಿಕಾರಿಗಳ ಮಕ್ಕಳು ಡ್ರಗ್ಸ್‌ ಸೇವಿಸುವುದಿಲ್ಲವೇ. ಅವರನ್ನು ಏಕೆ ವಿಚಾರಿಸುತ್ತಿಲ್ಲ ಎಂದು ‘ಆ ದಿನಗಳು’ ಖ್ಯಾತಿಯ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಪ್ರಶ್ನಿಸಿದ್ದಾರೆ. 

ಡ್ರಗ್ಸ್‌ ದಂಧೆಯಲ್ಲಿ ಚಿತ್ರನಟ, ನಟಿಯರಷ್ಟೇ ಸಿಲುಕಿದ್ದಾರೆ ಎಂದು ಬಿಂಬಿಸುವುದು ಸರಿಯಲ್ಲ. ಸಿನಿಮಾರಂಗ ಮಾತ್ರವಲ್ಲ ಎಲ್ಲೆಡೆ ಡ್ರಗ್ಸ್‌ ದಂಧೆ ಇಲ್ಲವೇ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೇಳಿದರು.

‘ಡ್ರಗ್ಸ್‌ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಆರೋಪಿಗಳನ್ನು ಅಪರಾಧಿಗಳಂತೆ ಬಿಂಬಿಸುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಅಮೆರಿಕದಲ್ಲಿ ಕರಡಿ ವೇಷದಲ್ಲಿರುವ ಪೊಲೀಸರು ಡ್ರಗ್ಸ್, ಸಿಗರೇಟ್‌ ಆಲ್ಕೋಹಾಲ್‌ ಸೇವನೆ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲೂ ಮಕ್ಕಳು ಮತ್ತು ಯುವಕರಿಗೆ ಡ್ರಗ್ಸ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳುವ ಕೆಲಸ ಆಗಬೇಕಿದೆ ಎಂದು ಚೇತನ್‌ ಆಶಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು