ಶನಿವಾರ, ಮೇ 28, 2022
27 °C

ತಿನ್ನಿ, ಕರಗಿಸಿ, ಮಲಗಿ ಮತ್ತು ಪುನರಾವರ್ತಿಸಿ: ಮಲೈಕಾ ಅರೋರಾರ ಫಿಟ್‌ನೆಸ್ ಮಂತ್ರ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಫಿ‌ಟ್‌ನೆಸ್ ವಿಚಾರದಲ್ಲಿ ಸದಾ ಉತ್ಸುಕರಾಗಿರುವ ನಟಿ ಮಲೈಕಾ ಅರೋರಾ ಸೋಮವಾರ ತಮ್ಮ ಅಭಿಮಾನಿಗಳೊಂದಿಗೆ 'ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ' ಮಾರ್ಗದರ್ಶಿಯನ್ನು ಹಂಚಿಕೊಂಡಿದ್ದಾರೆ.

ಯೋಗ ವೇದಿಕೆಗಳಾದ ಸರ್ವಾ ಮತ್ತು ದಿವಾ ಯೋಗದ ಸಹ-ಸಂಸ್ಥಾಪಕಿಯಾಗಿರುವ ಈ ನಟಿ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು, ರೋಗಗಳ ಅಪಾಯ ಕಡಿಮೆ ಮಾಡಲು ಮತ್ತು ಮಾನಸಿಕ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುವ ಯೋಗ ಆಸನಗಳಲ್ಲಿ ಒಂದನ್ನು ಸ್ವತಃ ಪ್ರದರ್ಶಿಸುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

'ಬೂದು ಬಣ್ಣದ ಯೋಗ ಉಡುಪನ್ನು ಧರಿಸಿದ ಮಲೈಕಾ ಅರೋರಾ ತನ್ನ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ: 'ಎಲ್ಲರಿಗೂ ನಮಸ್ತೆ, ಶುಭೋದಯ. ನಾನು ನಿಮಗಾಗಿ ರೋಮಾಂಚನಕಾರಿ ಸಂಗತಿಯೊಂದನ್ನು ಹೇಳುತ್ತಿದ್ದೇನೆ. ನಾನು ನಿಮ್ಮನ್ನು ಕೇಳುತ್ತಿದ್ದೇನೆ ತಿನ್ನಿ, ಕರಗಿಸಿ, ಮಲಗಿ ಮತ್ತು ಪುನರಾವರ್ತಿಸಿ' ಮತ್ತು ಜುಲೈ 26 ರಂದು ತನ್ನ 'ಹೊಟ್ಟೆಯ ಕೊಬ್ಬು ಕರಗಿಸುವ ವರ್ಕ್‌ಶಾಪ್' ಸೇರಲು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

ಕಳೆದ ವರ್ಷ ಕೋವಿಡ್-19 ಪಾಸಿಟಿವ್ ಆಗಿದ್ದ ಮಲೈಕಾ ಅರೋರಾ ಅವರು ಇತ್ತೀಚೆಗಷ್ಟೇ ಕೊರೊನಾ ವೈರಸ್ ಲಸಿಕೆಯ ಎರಡನೇ ಡೋಸ್‌ ಅನ್ನು ತೆಗೆದುಕೊಂಡಿದ್ದರು.

ಕೋವಿಡ್ ಚೇತರಿಕೆಯ ನಂತರ ಮಲೈಕಾ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಕಷ್ಟಕರವಾಗಿತ್ತು. ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡ ನಂತರ ವರ್ಕೌಟ್ ಮಾಡಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ಅವರು ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು