ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್ ಹಶ್ಮಿ ಜಿಮ್ ವರ್ಕೌಟ್: ನಟನ ಹೊಸ ರೂಪ ಇಲ್ಲಿದೆ..

ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್ ಚಿತ್ರಗಳ ಮೂಲಕವೇ ಹೆಸರು ಗಳಿಸಿದ್ದ ನಟ ಇಮ್ರಾನ್ ಹಶ‌್ಮಿ, ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಜಿಮ್‌ನಲ್ಲಿ ಶರ್ಟ್ ಬಿಚ್ಚಿ ವರ್ಕೌಟ್ ಮಾಡುತ್ತಿರುವ ಫೋಟೊ ಒಂದನ್ನು ನಟ ಇಮ್ರಾನ್ ಹಶ್ಮಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇಮ್ರಾನ್ ಹಶ್ಮಿ (42) 'ಇದು ಕೇವಲ ಆರಂಭ ಮಾತ್ರ' ಎನ್ನುವ ಅಡಿಬರಹ ನೀಡಿ, ಹೊಸ ಫೋಟೊ ಪೋಸ್ಟ್ ಮಾಡಿದ್ದು, ಅದರಲ್ಲಿ ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ್ದಾರೆ.

ಇಮ್ರಾನ್ ಫೋಟೊಗೆ 5 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಅಭಿಮಾನಿಗಳು ನಟನ ಹೊಸ ಲುಕ್ ಅನ್ನು ಮೆಚ್ಚಿಕೊಂಡಿದ್ದಾರೆ.

ಇಮ್ರಾನ್ ಹಶ‌್ಮಿ, ‘ಟೈಗರ್ ಜಿಂದಾ ಹೆ’ ಚಿತ್ರದ ಪಾತ್ರಕ್ಕಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡಿ, ದೇಹವನ್ನು ಸಜ್ಜುಗೊಳಿಸಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT