ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ ಚಿತ್ರ ಹಂಚಿಕೊಂಡ: ನಟಿ ಸೋಹಾ ಅಲಿ ಖಾನ್

Last Updated 12 ಫೆಬ್ರುವರಿ 2023, 8:42 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಸೋಹಾ ಅಲಿ ಖಾನ್ ಅವರು ತಮ್ಮ ಕುಟುಂಬದ ಜೊತೆಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಶರ್ಮಿಳಾ ಟಾಗೋರ್, ಇಬ್ರಾಹಿಂ, ತೈಮೂರ್, ಜೆಹ್ ಮತ್ತು ಇನಾಯಾ ಇದ್ದಾರೆ.

ಆದರೆ ಕಾರಣಾಂತರಗಳಿಂದ ಸೈಫ್ ಅವರ ಸಹೋದರಿ ಸಬಾ ಮತ್ತು ಮಗಳು ಸಾರಾ ಅಲಿ ಖಾನ್ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಕುಟುಂಬವು ಡೈನಿಂಗ್ ಟೇಬಲ್‌ನಲ್ಲಿ ಕುಳಿತು ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ಚಿತ್ರದೊಂದಿಗೆ ‘ ಹೆಮ್ಮೆಯ ಕ್ಷಣ’ ಎಂದು ಬರೆದುಕೊಂಡಿರುವ ಸೋಹಾ ಅವರು ಸಬಾ ಹಾಗೂ ಸಾರಾ ಇಲ್ಲದಿರುವುದನ್ನೂ ಉಲ್ಲೇಖಿಸಿದ್ದಾರೆ.

ಇದಕ್ಕೆ ಸೋಹಾ ಅವರ ಸಹೋದರಿ ಸಬಾ ಅಲಿ ಖಾನ್ ಲವ್ಲೀ, ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶರ್ಮಿಳಾ ಅವರು 'ಗುಲ್ಮೊಹರ್' ಚಿತ್ರದಲ್ಲಿ ಮನೋಜ್ ಬಾಜಪೇಯಿ ಅವರೊಂದಿಗೆ ನಟಿಸುತ್ತಿದ್ದಾರೆ. ಸೈಫ್‌ ಅವರು ಪ್ರಭಾಸ್‌ ಅಭಿನಯದ 'ಆದಿಪುರುಷ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾದಂಬರಿ ಆಧಾರಿತ ಸಿನಿಮಾ 'ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್' ಹಾಗೂ 'ದಿ ಕ್ರ್ಯೂ' ಸಿನಿಮಾಗಳಲ್ಲಿ ಕರೀನಾ ನಟಿಸುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT