ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಟ್‌ ಸರ್ಜರಿ ಅಡ್ಡ ಪರಿಣಾಮ: ನಿಧನರಾದ ನಟ, ನಟಿಯರು ಇವರು...

Last Updated 17 ಮೇ 2022, 12:39 IST
ಅಕ್ಷರ ಗಾತ್ರ

ಸಿನಿಮಾ ಕ್ಷೇತ್ರದಲ್ಲಿರುವವರು ತಮ್ಮ ದೇಹ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿವಹಿಸುತ್ತಾರೆ. ಕೆಲವರು ಡಯೆಟ್‌ ಮೂಲಕ ತಮ್ಮ ಆಂಗಿಕಸೌಂದರ್ಯ ಕಾಪಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ವಿವಿಧ ರೀತಿಯ ಸರ್ಜರಿ ಮೂಲಕ ತಮ್ಮ ಮೈಕಾಂತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಬಾಲಿವುಡ್‌, ಟಾಲಿವುಡ್‌ನಲ್ಲಿ ಹಲವಾರು ನಟ, ನಟಿಯರು ಪ್ಯಾಟ್‌ (ದೇಹದಲ್ಲಿ ಕೊಬ್ಬಿನ ಅಂಶಕರಗಿಸಲು) ಸರ್ಜರಿ ಸೇರಿದಂತೆ, ವಿವಿಧ ರೀತಿಯ ಕಾಸ್ಮೆಟಿಕ್‌ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಕೆಲವರು ಯಶಸ್ವಿಯಾದರೆ, ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.

ಚಂದನವನದಲ್ಲಿ ಈ ರೀತಿ ಸರ್ಜರಿ ಮಾಡಿಸಿಕೊಂಡ ಬಳಿಕ ಅಡ್ಡ ಪರಿಣಾಮಗಳಿಂದ ನಟ ಬುಲೆಟ್‌ ಪ್ರಕಾಶ್‌ ನಿಧನರಾದರು ಎಂದು ಹೇಳಲಾಗುತ್ತಿದೆ.ಈಗ ನಟಿ ಚೇತನಾ ರಾಜ್‌ ಚಿಕಿತ್ಸೆ ಸಂದರ್ಭದಲ್ಲಿಪ್ರಾಣ ಕಳೆದುಕೊಂಡಿದ್ದಾರೆ.

ಬುಲೆಟ್‌ ಪ್ರಕಾಶ್‌...

ಚಂದನವನದ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಅವರು ತೂಕ ಇಳಿಸಿಕೊಳ್ಳಲು ಪ್ಯಾಟ್‌ ಸರ್ಜರಿ ಮಾಡಿಸಿಕೊಂಡಿದ್ದರು. ಈ ಸರ್ಜರಿಯ ‘ಅಡ್ಡ ಪರಿಣಾಮ‘ಗಳಿಂದ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಸರ್ಜರಿ ಬಳಿಕ, ಅನಾರೋಗ್ಯದ ಕಾರಣದಿಂದ ಅವರಿಗೆ ನಟನೆಯ ಅವಕಾಶಗಳು ಕಡಿಮೆಯಾಗಿದ್ದವು.

2018ರಲ್ಲಿ ಪ್ರಕಾಶ್‌ ಫ್ಯಾಟ್‌ ಸರ್ಜರಿ ಮಾಡಿಸಿಕೊಂಡಿದ್ದರು. ಅತಿ ಹೆಚ್ಚು ತೂಕ ಹೊಂದಿದ್ದ ನಟ, ಸರ್ಜರಿ ಬಳಿಕ 35 ಕೆ.ಜಿ ತೂಕ ಇಳಿಸಿಕೊಂಡರು. ನಂತರ ಅಡ್ಡ ಪರಿಣಾಮಗಳಿಂದ ಅವರು ಕಿಡ್ನಿ, ಲೀವರ್‌ ಸಮಸ್ಯೆಗೆ ತುತ್ತಾದರು. 2020ರಲ್ಲಿ ಅವರು ನಿಧನರಾದರು.

ಚೇತನಾ ರಾಜ್‌

ಕಲರ್ಸ್‌ ಕನ್ನಡದ ‘ಗೀತಾ’, ‘ದೊರೆಸಾನಿ’, ‘ಒಲವಿನ ನಿಲ್ದಾಣ’ ಮುಂತಾದ ಧಾರಾವಾಹಿ ಹಾಗೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಚೇತನಾ ರಾಜ್‌ ಕೂಡ ಕಾಸ್ಮೆಟಿಕ್‌ ಸರ್ಜರಿಗೆ ಒಳಗಾಗಿ ನಿಧನರಾದರು.

ದೇಹದಲ್ಲಿ ಕೊಬ್ಬಿನ ಅಂಶ(ಫ್ಯಾಟ್‌) ಕರಗಿಸಲು ಅವರು ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಸಂದರ್ಭದಲ್ಲಿ ಉಸಿರಾಟ ಸಮಸ್ಯೆಯಿಂದ ನಿಧನರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನವರಾದ ನಟಿ ಆರತಿ ಅಗರ್‌ವಾಲ್‌ ತೆಲುಗು ಸಿನಿಮಾರಂಗದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದರು. ಅವರು ತಮ್ಮ ದೇಹ ಕಾಂತಿಗಾಗಿ ‘ಲಿಪೋಸೆಕ್ಷನ್‘ ಎಂಬ ಸರ್ಜರಿ ಮಾಡಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಅವರ ತೂಕ ಹೆಚ್ಚಾಯಿತು. ತೂಕ ಇಳಿಸಿಕೊಳ್ಳಲುಅವರು ಮತ್ತೆ ಫ್ಯಾಟ್‌ ಸರ್ಜರಿ ಮೊರೆ ಹೋದರು. ಈ ಚಿಕಿತ್ಸೆ ಬಳಿಕ ತೂಕ ಇಳಿಸಿಕೊಂಡರಾದರೂ ಕೆಲವೇ ತಿಂಗಳಲ್ಲಿ ಅವರು ನಿಧನರಾದರು.

ಬಾಲಿವುಡ್‌ ನಟಿ ಶ್ರೀದೇವಿ, ನಟ ರಾಕೇಶ್‌ ಕೂಡ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡ ಕೆಲವೇ ತಿಂಗಳಲ್ಲಿ ನಿಧನರಾದರು. ಅವರು ಕೂಡ ಸರ್ಜರಿಯ ಅಡ್ಡ ಪರಿಣಾಮಗಳಿಂದಲೇ ನಿಧನರಾದರು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT