ಶನಿವಾರ, ಸೆಪ್ಟೆಂಬರ್ 25, 2021
27 °C

ತೆಲುಗಿನಲ್ಲಿ ಮತ್ತೆ ವಿಜಯ್ ಸೇತುಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟನೆ, ನಿರ್ಮಾಣ, ಹಿನ್ನೆಲೆ ಗಾಯನ, ಸಾಹಿತ್ಯ ರಚನೆ ಹೀಗೆ ಬಹುಪ್ರತಿಭೆಯುಳ್ಳ ನಟ ವಿಜಯ್ ಸೇತುಪತಿ. ತಮ್ಮ ವಿಭಿನ್ನ ನಟನೆಯ ಮೂಲಕವೇ ಕಾಲಿವುಡ್ ಅಂಗಳದಲ್ಲಿ ಖ್ಯಾತಿ ಪಡೆದ ಈ ನಟ ತೆಲುಗಿನಲ್ಲೂ ಬಣ್ಣ ಹಚ್ಚಿದ್ದಾರೆ. 

ನಟ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಮೂಲಕ ವಿಜಯ್‌ ಟಾಲಿವುಡ್‌ಗೆ ಪ್ರವೇಶ ಪಡೆದಿದ್ದರು. ಈಗ ಮತ್ತೆ ತೆಲುಗು ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. 

ಚಿರಂಜೀವಿ ಸೋದರಳಿಯ, ನಟ ಸಾಯಿ ಧರ್ಮ ತೇಜ್ ಅವರ ತಮ್ಮ ಪಂಜಾ ವೈಷ್ಣವ್‌ ತೇಜ್ ಅಭಿನಯದ ಚೊಚ್ಚಲ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ವಿಜಯ್ ನಟಿಸಲಿದ್ದಾರೆ. ಆ ಮೂಲಕ ಎರಡನೇ ಬಾರಿ ತೆಲುಗು ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೈತ್ರಿ ಫಿಲಂ ಮೇಕರ್ಸ್‌ ‘ಮಕ್ಕಳ್‌ ಸೆಲ್ವಂ ವಿಜಯ್ ಸೇತುಪತಿ ಅವರು ವೈಷ್ಣವ್ ತೇಜ್ ಅಭಿನಯದ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶಿಸಲಿದ್ದಾರೆ’ ಎಂದು ತಿಳಿಸಿದೆ. 

ಬಾಬು ಸನಾ ಟಾಲಿವುಡ್‌ನ ಖ್ಯಾತ ನಿರ್ದೇಶಕ ಸುಕುಮಾರ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಸೇತುಪತಿ ಅಭಿನಯಿಸಲಿರುವ ಆ ಚಿತ್ರಕ್ಕೆ ಇನ್ನೂ ಟೈಟಲ್ ನಿಗದಿಯಾಗಿಲ್ಲ. ಮನೀಷಾ ರಾಜ್ ಹಿರೋಯಿನ್ ಆಗಿ ನಟಿಸಲಿರುವ ಈ ಚಿತ್ರ ಮೇ ತಿಂಗಳಿನಲ್ಲಿ ಸೆಟ್ಟೇರಲಿದೆ.

ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಲಿದ್ದು ಶಮ್ದಾತ್ ಸೈಯುದ್ದಿನ್ ಛಾಯಾಗ್ರಹಣವಿದೆ. ಸುಧೀರ್ ರೆಡ್ಡಿ ನಿರ್ದೇಶನದ ಸೈರಾ ಸಿನಿಮಾದಲ್ಲಿ ರಾಜಾ ಪಾಂಡಿ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಅಭಿನಯದ 96 ಸಿನಿಮಾ ಕಾಲಿವುಡ್‌ ಅಂಗಳದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು