ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ ಬರುವ ಸಿನಿಮಾಗಳಿವು...

Last Updated 16 ಮೇ 2019, 19:51 IST
ಅಕ್ಷರ ಗಾತ್ರ

ರತ್ನಮಂಜರಿ

ಸಂದೀಪ್ ಕುಮಾರ್, ಡಾ. ನವೀನ್ ಕೃಷ್ಣ ಹಾಗೂ ನಟರಾಜ ಹಳೆಬೀಡು ನಿರ್ಮಾಣದ ಸಿನಿಮಾ ಇದು. ಇದರಲ್ಲಿ ಅಮೆರಿಕದಲ್ಲಿ ನಡೆದ ಘಟನೆಗೆ ಕರ್ನಾಟಕದ ಜೊತೆಗಿನ ಸಂಬಂಧದ ಕಥೆ ಇದೆ ಎಂದು ಚಿತ್ರತಂಡ ಹೇಳಿದೆ. ಅಮೆರಿಕದಲ್ಲಿ ದಶಕಗಳ ಹಿಂದೆ ನಡೆದ ಕಥೆ ಆಧರಿಸಿ ಈ ಸಿನಿಮಾ ರೂಪುಗೊಂಡಿದೆ. ಚಿತ್ರದ ಅರ್ಧದಷ್ಟು ಭಾಗವನ್ನು ಅಮೆರಿಕದಲ್ಲಿ, ಇನ್ನರ್ಧ ಭಾಗವನ್ನು ಮಡಿಕೇರಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ನಿರ್ದೇಶನ ಪ್ರಸಿದ್ಧ್ ಅವರದ್ದು. ರಾಜ್ ಚರಣ್, ಅಖಿಲಾ ಪ್ರಕಾಶ್, ಪಲ್ಲವಿ ರಾಜು, ಕನ್ನಿಕಾ ಹಾಗೂ ಶ್ರದ್ಧಾ ಸಾಲಿಯಾನ್ ತಾರಾಗಣದಲ್ಲಿ ಇದ್ದಾರೆ. ಪ್ರೀತಂ ಮತ್ತು ಕಿಟ್ಟಿ ಛಾಯಾಗ್ರಹಣ, ಹರ್ಷವರ್ಧನ ರಾಜ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಕಾರ್ಮೋಡ ಸರಿದು

ಕುದುರೆಮುಖ ಟಾಕೀಸ್ ನಿರ್ಮಿಸಿರುವ, ಉದಯಕುಮಾರ್ ಪಿ.ಎಸ್ ನಿರ್ದೇಶನದ ಈ ಚಿತ್ರಕ್ಕೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಡಾ.ವಿ. ನಾಗೇಂದ್ರ ಪ್ರಸಾದ್ ಹಾಗೂ ಕಿರಣ್ ಚಂದ್ರ ಹಾಡುಗಳನ್ನು ರಚಿಸಿದ್ದಾರೆ. ಮಂಜು ರಾಜಣ್ಣ, ಅದ್ವಿತಿ ಶೆಟ್ಟಿ, ಅಶೋಕ್, ದಿವ್ಯಶ್ರೀ, ಶ್ರೀಧರ್, ಮಾಸ್ಟರ್ ಹೇಮಂತ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮೂಕವಿಸ್ಮಿತ

ಟಿ.ಪಿ. ಕೈಲಾಸಂ ಅವರ ‘ಟೊಳ್ಳು ಗಟ್ಟಿ’ ನಾಟಕ ಆಧಾರಿತ ಈ ಚಿತ್ರವನ್ನು ಗುರುದತ್ ಶ್ರೀಕಾಂತ್ ನಿರ್ದೇಶಿಸಿದ್ದಾರೆ. ಕೈಲಾಸಂ ಅವರು 1920ರಲ್ಲಿ ರಚಿಸಿದ ‘ಟೊಳ್ಳು ಗಟ್ಟಿ’ 90 ನಿಮಿಷ ಅವಧಿಯದ್ದು. ಅದನ್ನು ಸಿನಿಮಾದಲ್ಲಿ ಎರಡು ಗಂಟೆ ಅವಧಿಯಲ್ಲಿ ಹೇಳಲಾಗಿದೆ. ಗುರುದತ್ ಈ ಚಿತ್ರದಲ್ಲಿ ಮೂರು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಂದೀಪ್ ಮಲಾನಿ, ಶುಭರಕ್ಷಾ, ವಾಣಿಶ್ರೀ ಭಟ್, ಚಂದ್ರಕೀರ್ತಿ, ಪುಷ್ಪ ರಾಘವೇಂದ್ರ, ಶಿಲ್ಪಾ ಭಾಗವತರ್, ಚಿದಾನಂದ್ ಕುಲಕರ್ಣಿ, ಡಿ. ಶ್ರೀಕಾಂತ್, ಸೂರಜ್ ತಾರಾಗಣದಲ್ಲಿದ್ದಾರೆ. ಡಾ. ಚಿನ್ಮಯ ಎಂ. ರಾವ್ ಸಂಗೀತ, ಸಿದ್ದು ಬಿ.ಎಸ್. ಛಾಯಾಗ್ರಹಣ ಚಿತ್ರಕ್ಕಿದೆ.

ಹೌಲಾ ಹೌಲಾ

ಸುಶೀಲಾ ಮತ್ತು ಡಾ. ರಮೇಶ್ ಚೌಧರಿ ನಿರ್ಮಿಸಿರುವ ಈ ಚಿತ್ರದ ನಿರ್ದೇಶನ ಎಸ್.ಪಿ. ಪಾಟೀಲ್ (ಕಲಬುರ್ಗಿ) ಅವರದ್ದು. ಸುರೇಶ್ ವರ್ಮ ಛಾಯಾಗ್ರಹಣ , ಶ್ಯಾಂಡಿ ಸಂಗೀತ ಚಿತ್ರಕ್ಕಿದೆ.

ನಟ ವಿಷ್ಣುವರ್ಧನ್ ಅಭಿಮಾನಿಯೊಬ್ಬಳ ಕಥೆ ಇದು. ಆರತಿ ಕುಲಕರ್ಣಿ, ಶೋಭರಾಜ್, ಹನುಮಂತರಾಯ ಗೌಡ, ಅಮಿತ್, ವಿಜಯ್ ಚೆಂಡೂರ್, ಶಾಲಿನಿ, ಪೃಥ್ವಿ, ಮೇಘನಾ, ಮಂಜು, ಲಯೇಂದ್ರ, ದಿವ್ಯ, ರಿಷಿ ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT