ಗುರುವಾರ , ನವೆಂಬರ್ 21, 2019
22 °C

ಮಹಾರಾಷ್ಟ್ರ, ಹರಿಯಾಣ ಚುನಾವಣೆ: ಮತ ಹಾಕಿದ ಸಿನಿಮಾ ಸ್ಟಾರ್‌ಗಳು...

Published:
Updated:

ನವದೆಹಲಿ: ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಬಾಲಿವುಡ್‌ನ ಸಿನಿಮಾ ನಟ ನಟಿಯರು ಮತ ಚಲಾವಣೆ ಮಾಡಿದರು. 

ಹರಿಯಾಣದ ಹಿಸಾರ್‌ನಲ್ಲಿ ಟಿಕ್‌ ಟಾಕ್‌ ಸ್ಟಾರ್‌ ಹಾಗೂ ಅದಂಪುರ್‌ ವಿಧಾನಸಭಾ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಸೋನಾಲಿ ಫೋಗಟ್‌ ಮತಚಲಾವಣೆ ಮಾಡಿದರು. 

ನಟರಾದ ಮಧುರ್ ಭಂಡಾರ್ಕರ್‌, ವರುಣ್ ಧವನ್‌, ಜಾನ್‌ ಅಬ್ರಾಹಂ ಅವರು ಮುಂಬೈನಲ್ಲಿ ಮತ ಹಾಕಿದರು.

ಮುಂಬೈನ ಲಾತುರ್‌ನಲ್ಲಿ ನಟ ರಿತೇಶ್‌ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ಡಿಸೋಜಾ ಮತ ಚಲಾವಣೆ ಮಾಡಿದರು. 

ಪಶ್ಚಿಮ ಬಾಂದ್ರದಲ್ಲಿ ನಟಿ ಮಾಧುರಿ ದೀಕ್ಷಿತ್‌ ಮತ ಹಾಕಿದರು. 

ಮರಾಠಿ ಸಿನಿಮಾದ ಹಿರಿಯ ನಟಿ ಶುಭಾ ಖೋಟೆ, ನಟ ರವಿ ಕಿಶನ್‌ ಹಾಗೂ ನಟಿ ಪದ್ಮಿನಿ ಕೊಲ್ಲಾಪುರಿ ಅವರು ಮುಂಬೈನ ಅಂದೇರಿಯಲ್ಲಿ ಮತ ಚಲಾವಣೆ ಮಾಡಿದರು.  

ಪಶ್ಚಿಮ ಅಂದೇರಿಯಲ್ಲಿ ಬಾಲಿವುಡ್‌ ಹಿರಿಯ ನಟ ಗೋವಿಂದ್‌ ಹಾಗೂ ಅವರ ಪತ್ನಿ ಸುನೀತಾ ಮತ ಹಾಕಿದರು.

ಪ್ರತಿಕ್ರಿಯಿಸಿ (+)