ಮಲಾಲ ಬದುಕಿನ ‘ಗುಲ್‌ ಮಕೈ’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ

7

ಮಲಾಲ ಬದುಕಿನ ‘ಗುಲ್‌ ಮಕೈ’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ

Published:
Updated:
‘ಗುಲ್‌ ಮಕೈ’ ಚಿತ್ರದ ಫಸ್ಟ್‌ ಲುಕ್‌. ಚಿತ್ರ: ಎಎನ್‌ಐ ಟ್ವೀಟ್‌

ನವದೆಹಲಿ: ಹೆಣ್ಣುಮಕ್ಕಳ ಶಿಕ್ಷಣ ಹಕ್ಕು ಕುರಿತು ಧ್ವನಿ ಎತ್ತಿದ್ದ ಕಾರಣಕ್ಕೆ ತಾಲಿಬಾನಿ ಉಗ್ರರ ಗುಂಡೇಟಿಗೆ ತೀವ್ರ ಗಾಯಗೊಂಡಿದ್ದ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸುಫ್‌ಜೈ ಅವರ ಜೀವನ ಆಧಾರಿತ ಸಿನಿಮಾ ‘ಗುಲ್‌ ಮಕೈ’ ನಿರ್ಮಿಸುತ್ತಿರುವ ಬಾಲಿವುಡ್‌, ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ.

ಕಿರಿಯ ವಯಸ್ಸಿನಲ್ಲಿ ನೋಬಲ್ ಪುರಸ್ಕೃತರಾದ ಮಲಾಲ ತನ್ನ 14ನೇ ವಯಸ್ಸಿನಲ್ಲಿ ಶಾಲೆಯಿಂದ ಹಿಂದಿರುಗುವಾಗ ಪಾಕಿಸ್ತಾನದಲ್ಲಿನ ಸ್ವಾತ್‌ ಕಣಿವೆ ಪ್ರದೇಶದಲ್ಲಿ ಉಗ್ರರ ದಾಳಿಗೊಳಗಾಗಿದ್ದರು. ಅವರ ಬದುಕಿನ ಆ ದಿನಗಳ ಪಯಣವೇ ಈ ಚಿತ್ರ.

ಚಿತ್ರದ ಟೀಸರ್‌ ಕೂಡಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಸಿನಿಮಾ ತಂಡ ಹೇಳಿದೆ.

‘ಗುಲ್‌ ಮಕೈ’ ಚಿತ್ರವನ್ನು ಅಮ್ಜದ್‌ ಖಾನ್‌ ನಿರ್ದೇಶಿಸಿದ್ದು, ಅಜಜ್‌ ಖಾನ್‌ ಸೇರಿದಂತೆ ರೀಮ್‌ ಶೇಖ್‌, ದಿವ್ಯಾ ದತ್‌, ಮುಖೇಶ್‌ ರಿಷಿ, ಅಭಿಮನ್ಯು ಸಿಂಗ್‌ ನಟಿಸಿದ್ದಾರೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

‘ಗುಲ್‌ ಮಕೈ’ ಎಂದರೆ ಪ್ರಸಿದ್ಧ ಜನಪದ ಕಥೆಯೊಂದರ ನಾಯಕಿ.

ತಾಲಿಬಾನಿಗಳ ದಾಳಿಯ ಬಳಿಕ ಕೋಮಾ ಸ್ಥಿತಿಯಲ್ಲಿದ್ದ ಮಲಾಲ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಕಳುಹಿಸಲಾಗಿತ್ತು. ಮಲಾಲ ಬದುಕುಳಿದರೆ ಮತ್ತೆ ದಾಳಿ ಮಾಡುವುದಾಗಿ ತಾಲಿಬಾನ್‌ ಬೆದರಿಕೆ ಹಾಕಿತ್ತು. ಮಲಾಲ ಸದ್ಯ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಅವರಿಗೆ ತಮ್ಮ 17ನೇ ವಯಸ್ಸಿಗೆ 2014ರಲ್ಲಿ ಶಾಂತಿ ನೋಬೆಲ್‌ ಪ್ರಶಸ್ತಿ ಸಂದಿತು. ಭಾರತದ ಕೈಲಾಶ್‌ ಸತ್ಯಾರ್ಥಿ ಜತೆ ಅವರು ಪ್ರಶಸ್ತಿ ಹಂಚಿಕೊಂಡಿದ್ದರು.

ಮಲಾಲ ಅವರು ಲಾಭ ರಹಿತ ಉದ್ದೇಶದ ‘ಮಲಾಲ ಫಂಡ್‌’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ‘ನಾನು ಮಲಾಲ’('I am Malala') ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಶಿಕ್ಷಣ ಪ್ರಾಮುಖ್ಯತೆ ಕುರಿತು ಅವರು ತಮ್ಮ ಭಾಷಣಗಳಲ್ಲಿ ಮಾತನಾಡುತ್ತಾ, ಜಾಗೃತಿಯಲ್ಲಿ ತೊಡಗಿದ್ದಾರೆ.


ಮಲಾಲ ಯೂಸುಫ್‌ಜೈ 

 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !