ಭಾನುವಾರ, ಜೂನ್ 26, 2022
27 °C

4 ಎನ್‌ 6 ಶೀರ್ಷಿಕೆ ಬಿಡುಗಡೆ: ಪ್ರಮುಖ ಪಾತ್ರದಲ್ಲಿ ‘ರಚನಾ ಇಂದರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

4 ಎನ್‌ 6 (ಫೋರ್‌ ಎನ್‌ ಸಿಕ್ಸ್‌) ಚಿತ್ರ ಸೆಟ್ಟೇರಿದೆ. ನಾಯಕಿ ಪ್ರಧಾನ ಚಿತ್ರವಿದು. ಲವ್ ಮಾಕ್ಟೇಲ್ ಹಾಗೂ ಲವ್ 360 ಚಿತ್ರಗಳ ಖ್ಯಾತಿಯ ರಚನಾ ಇಂದರ್ ಈ ಚಿತ್ರದಲ್ಲಿ ಪತ್ತೆದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾನಕ ಹೊಂದಿದೆಯಂತೆ ಈ ಚಿತ್ರ. ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಲಾಂಛನದಲ್ಲಿ ಕರಣ್‌ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಶೀರ್ಷಿಕೆ ಬಿಡುಗಡೆ ಮಾಡಿದರು.  

ಕೊಲೆ ಘಟನೆಯ ತನಿಖೆಯ ಸುತ್ತ ನಡೆಯುವ ಕಥೆ ಇದು. ದರ್ಶನ್‌ ಶ್ರೀನಿವಾಸ್‌ ಚಿತ್ರದ ನಿರ್ದೇಶಕರು. ಜೂನ್ ಮೊದಲವಾರ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಚರಣ್ ತೇಜ್ ಅವರ ಛಾಯಾಗ್ರಹಣ ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನವಿದೆ. ಹೊಸ ಪ್ರತಿಭೆಗಳಾದ ನವೀನ್, ಮೇಘನಾ, ಸಂಜಯ್ ನಾಯಕ್, ಸೌರವ್, ಸತ್ಯ ಹಾಗೂ ರೇಣುಕಾ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಓದಿ... ‘ಬಘೀರ’ ಚಿತ್ರದ ಮುಹೂರ್ತ: ಮತ್ತೆ ಒಂದಾದ ಶ್ರೀಮುರಳಿ –ಪ್ರಶಾಂತ್ ನೀಲ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು