ಮೈಸೂರು: ವಂಚನೆ ಪ್ರಕರಣದ ಆರೋಪಿ ಮಹಿಳೆ ಅರುಣಕುಮಾರಿ ಹಿಂದೆ ಯಾರಿದ್ದಾರೆ ಎಂಬ ಅಂಶವನ್ನು ಬಯಲಿಗೆಳೆಯಬೇಕು ಎಂದು ನಟ ದರ್ಶನ್ ಒತ್ತಾಯಿಸಿದರು.
ಈಗ ಮಹಿಳೆಯು ನಿರ್ಮಾಪಕ ಉಮಾಪತಿ ಈ ಕೆಲಸ ಮಾಡಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆದಾಗ್ಯೂ ನನಗೆ ಉಮಾಪತಿ ಕುರಿತು ಸಂದೇಹ ಇಲ್ಲ. ಆದರೆ ಉಮಾಪತಿ ಈ ಆರೋಪ ಕುರಿತು ಸ್ಪಷ್ಟನೆ ನೀಡಬೇಕು ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸ್ನೇಹಿತರಾದ ಹರ್ಷ ಮೆಲಂತಾ ಹಾಗೂ ರಾಕೇಶ್ ಪಾಪಣ್ಣ ₹ 25 ಕೋಟಿ ಸಾಲಕ್ಕೆ ಅರ್ಜಿ ಹಾಕಿದ್ದು ಅದರಲ್ಲಿ ನನ್ನ ಆಧಾರ್ ಸಂಖ್ಯೆಯನ್ನು ನಮೂದಿಸಿದ್ದಾರೆ ಎಂದು ಮೊದಲಿಗೆ ಮಹಿಳೆ ಹೇಳಿದರು. ಏಕೆ ಅವರು ಈ ರೀತಿ ಹೇಳಿದರು. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು ಎಂದರು.
ಇದರ ಹಿಂದೆ ಸ್ನೇಹವನ್ನು ಕದಡುವ ಉದ್ದೇಶ ಇದ್ದಿರಬಹುದೆ ಅಥವಾ ಬೇರೆ ಏನಾದರೂ ಉದ್ದೇಶ ಇರಬಹುದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಆರೋಪಿ ಅರುಣಕುಮಾರಿಯು ಹರ್ಷ ಮೆಲಂತಾ ಅವರ ಕ್ಲಬ್ ನಲ್ಲಿ ಕೆಲಸ ಮಾಡುತ್ತಿರುವ ಕುಮಾರ್ ಅವರ ಪತ್ನಿ. ಕೇವಲ ದ್ವಿತೀಯ ಪಿಯು ಮಾತ್ರ ಅವರು ವ್ಯಾಸಂಗ ಮಾಡಿದ್ದಾರೆ. ಕಳೆದ 8 ವರ್ಷಗಳಿಂದ ಅವರು ಬೇರೆ ಬೇರೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.