ಬೆಂಗಳೂರು:'ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ ಅವರ ಸೂಚನೆಯ ಮೇರೆಗೆ ನಾನು ಮತ್ತು ಶಿಲ್ಪಾ ಶ್ರೀನಿವಾಸ್ ಗಡ್ಡಪ್ಪ ಅವರ ಮನೆಗೆ ಹೋಗಿ ಭೇಟಿಯಾಗಿ ಬಂದೆವು. ಗಡ್ಡಪ್ಪ ಆರೋಗ್ಯವಾಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ' ಎಂದು ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾ.ಮ. ಹರೀಶ್ ತಿಳಿಸಿದರು.

'ನಾವು ಬಂದಿರುವುದಕ್ಕೆ ಗಡ್ಡಪ್ಪ ಅವರ ಕುಟುಂಬದವರು ಸಂತೋಷ ವ್ಯಕ್ತಪಡಿಸಿದರು. ಕುಟುಂಬದ ಪರಿಸ್ಥಿತಿಯ ಬಗ್ಗೆ, ಗಡ್ಡಪ್ಪ ಅವರ ಚಿಕಿತ್ಸೆಯ ಬಗ್ಗೆ ಅವರ ಜತೆ ಮಾತನಾಡಿ ವಿಷಯ ಸಂಗ್ರಹಿಸಿದ್ದೆ. ಅದನ್ನು ಅಧ್ಯಕ್ಷರಿಗೆ ವಿವರಿಸುತ್ತೇವೆ. ಮುಂದಿನ ಶುಕ್ರವಾರ ಅಥವಾ ಶನಿವಾರ ವಾಣಿಜ್ಯ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಮತ್ತೆ ಗಡ್ಡಪ್ಪ ಅವರ ಮನೆಗೆ ಭೇಟಿ ನೀಡಿ ಸೂಕ್ತ ಸಹಾಯ ಮಾಡುತ್ತೇವೆ' ಎಂದೂ ಅವರು ಹೇಳಿದರು.

'ಗಡ್ಡಪ್ಪ ತೀರಿಕೊಂಡಿದ್ದಾರೆ ಎಂಬ ಸುದ್ದಿ ಫೇಸ್ ಬುಕ್ ನಲ್ಲಿ ಹರಿದಾಡಿದ್ದರಿಂದ ಅವರ ಕುಟುಂಬದವರಿಗೆ ನೋವಾಗಿದೆ. ನಮ್ಮ ಬಳಿ ಈ ಕುರಿತು ಬೇಸರ ವ್ಯಕ್ತಪಡಿಸಿದರು' ಎಂದೂ ಹರೀಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.