‘ಭಾವಚಿತ್ರ’ದಲ್ಲಿ ಕಾಣಿಸಲಿದ್ದಾರೆ ಗಾನವಿ ಲಕ್ಷ್ಮಣ್. ಚಕ್ರವರ್ತಿ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ ಗಾನವಿ. ಅಂದಹಾಗೆ ಗಾನವಿ ಅವರು ‘ಮಗಳು ಜಾನಕಿ’ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದವರು.

‘ಭಾವಚಿತ್ರ’ಕ್ಕೆಗಿರೀಶ್ ಕುಮಾರ್ ಬಿ. ಅವರ ಕಥೆ, ನಿರ್ದೇಶನವಿದೆ. ಗಿರೀಶ್ ಅವರ ಎರಡನೇ ಚಿತ್ರವಿದು. ಚಿತ್ರಕಥೆಗೆ ಗಿರೀಶ್ ಬಿಜ್ಜಳ ಕೈಜೋಡಿಸಿದ್ದಾರೆ. 55 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಇತ್ತೀಚೆಗೆ ಮುಕ್ತಾಯವಾಗಿದೆ.ಬೆಂಗಳೂರು, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಕಡೆ ಚಿತ್ರೀಕರಣ ನಡೆದಿದೆ.

ಚಿತ್ರದಲ್ಲೇನಿದೆ?

‘ಮೊಬೈಲ್ ಬಂದಾಗಿನಿಂದ ಎಲ್ಲರಿಗೂ ಭಾವಚಿತ್ರದ ಮೇಲೆ ಹೆಚ್ಚಿನ ಒಲವು. ಕ್ಯಾಮೆರಾ ಹಾಗೂ ಭಾವಚಿತ್ರದ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದನ್ನು ಟೆಕ್ನೋ ಥ್ರಿಲ್ಲರ್ ಅಂತಲೂ ಕರೆಯಬಹುದು. ಇದಷ್ಟೇ ಅಲ್ಲ. ಪ್ರೀತಿ ಹಾಗೂ ಭಾವನಾತ್ಮಕ ಸನ್ನಿವೇಶಗಳು ನಮ್ಮ ಚಿತ್ರದಲ್ಲಿವೆ’ ಎನ್ನುತ್ತಾರೆ ನಿರ್ದೇಶಕ ಗಿರೀಶ್ ಕುಮಾರ್.

ವುಡ್ ಕ್ರೀಪರ್ಸ್ ಸಂಸ್ಥೆ ಲಾಂಛನದ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.ಶಿವು ಬೇರಗಿ ಹಾಗೂ ವಿಶ್ವಜಿತ್ ರಾವ್ ಹಾಡು ಬರೆದಿದ್ದಾರೆ. ಬರೆದಿರುವ ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಅಜೇಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ಚಕ್ರವರ್ತಿ, ಗಾನವಿ ಲಕ್ಷ್ಮಣ್, ಅವಿನಾಶ್, ಕಾರ್ತಿಕ್ ಸುಂದರಂ, ಗಿರೀಶ್ ಬಿಜ್ಜಳ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.