ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನಿಗಾಗಿ ಬದಲಾದ ಧಾರಾವಾಹಿ ಸಮಯ

Last Updated 29 ಆಗಸ್ಟ್ 2019, 9:59 IST
ಅಕ್ಷರ ಗಾತ್ರ

ಗಣೇಶ ಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಲು ಉದಯ ಟಿ.ವಿ ಇದೇ ಸೊಮವಾರದಿಂದ ವಕ್ರತುಂಡನಿಗಾಗಿ ವಿಶೇಷ ಸಂಚಿಕೆಗಳನ್ನು ಪ್ರಸಾರ ಮಾಡಲಿದೆ.

‘ದೇವಯಾನಿ’ ಧಾರಾವಾಹಿಯಲ್ಲಿ ಗಣೇಶ ಹಬ್ಬದ ವಿಶೇಷ ಸಂಚಿಕೆಗಳು ಪ್ರಸಾರವಾಗಲಿವೆ. ‌ಈ ಸಂಚಿಕೆಗಳು ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆಪ್ರಸಾರವಾಗಲಿದೆ.

ಕಥಾನಾಯಕ ಶ್ರೀಗೆ ಕೆಲವು ದಿನಗಳ ಹಿಂದೆ ಅಪಘಾತವಾಗಿ ಅವನನ್ನು ಕಾಡು ಜನಗಳು ಕಾಪಾಡಿರುತ್ತಾರೆ. ಅದರಲ್ಲಿ ಚೆಲ್ವಿ ಶ್ರೀನನ್ನು ಕಾಳಜಿಯಿಂದ ನೋಡಿಕೊಂಡು ಅವನು ಬೇಗ ಗುಣಮುಖನಾಗಲು ಕಾರಣವಾಗಿರುತ್ತಾಳೆ. ಶ್ರೀ ಕೂಡ ಅವಳನ್ನು ಅತ್ಯಂತ ಗೌರವದಿಂದ ಕಾಣುತ್ತಿರುತ್ತಾನೆ. ಆದರೆ ಚೆಲ್ವಿಗೆ ಶ್ರೀ ಮೇಲೆ ಮನಸಾಗಿರುತ್ತದೆ ಆದರೆ, ಶ್ರೀಯಲ್ಲಿ ಹೇಳಿಕೊಂಡಿರುವುದಿಲ್ಲ.

ದೇವಯಾನಿಯು ಶ್ರೀ ಬದುಕಿದ್ದಾನೆಂದು, ಗಣೇಶ ಹಬ್ಬ ಆಚರಿಸಲೇಬೇಕೆಂದು ಪಟ್ಟು ಹಿಡಿದು ಗಣೇಶನ ಪೂಜೆಯನ್ನು ಮನೆಯಲ್ಲಿ ಏರ್ಪಡಿಸುತ್ತಾಳೆ. ಇನ್ನೊಂದೆಡೆ ಕಾಡಿನಲ್ಲಿ ದೇವರ ಮುಂದೆ ವಿಶೇಷ ಆಚರಣೆ ಸಿದ್ಧವಾಗಿರುತ್ತದೆ. ಗಂಡ, ಹೆಂಡತಿಗೆ ಅಥವಾ ಗಂಡು ಸ್ನೇಹಿತೆಯಂತಿರುವ ತನ್ನ ಗೆಳತಿಗೆ ಕಂಕಣ ಕಟ್ಟುವ ಶಾಸ್ತ್ರ ಅದು. ಅಲ್ಲಿ ಹತ್ತಾರು ಜನರ ಮುಂದೆ, ಶ್ರೀ ಚೆಲ್ವಿಗೆ ಕಂಕಣ ಕಟ್ಟಿಬಿಡುತ್ತಾನೆ. ಚೆಲ್ವಿಗೆ, ಶ್ರೀ ತನ್ನ ಜೊತೆಗಾರನಾಗಿಬಿಡುತ್ತಾನೆಂಬ ಆಸೆ ಚಿಗುರುತ್ತದೆ. ಗಂಡನನ್ನು ಉಳಿಸಿಕೊಳ್ಳಲು ಗಣೇಶನ ಮೊರೆ ಹೋಗಿರುವ ದೇವಯಾನಿ ಒಂದೆಡೆಯಾದರೆ, ಕಾಡು ಗಣೇಶನ ಸನ್ನಿಧಿಯಲ್ಲಿ ಹೆಂಡತಿಯ ನೆನಪೇ ಇಲ್ಲದೆ, ಶ್ರೀ ಇನ್ನೊಬ್ಬಳ ಬದುಕಿಗೆ ಪ್ರವೇಶಿಸಿಬಿಡುತ್ತಾನಾ ಎಂಬುದೇ ಕುತೂಹಲ.

ಸೇವಂತಿಯಲ್ಲೂ ಫುಲ್‌ ಮನರಂಜನೆ

ವಿಶೇಷ ದಿನಗಳಲ್ಲಿ ಹೊಸತನ ಕಾಯ್ದುಕೊಳ್ಳುವ‘ಸೇವಂತಿ’ ಧಾರಾವಾಹಿ, ಇದೀಗ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆ ಹೊತ್ತು ತಂದಿದೆ. ಗಣೇಶ ಹಬ್ಬದ ವಿಶೇಷ ‘ಸೇವಂತಿ’ಯ ಸಂಚಿಕೆ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.

ಸಾಕು ತಂದೆಯನ್ನು ಜೈಲಿನಿಂದ ಬಿಡಿಸಲು ನಾಯಕಿ ಸೇವಂತಿ, ಲಾಯರ್ ಅರ್ಜುನನ ಮೊರೆ ಹೋಗುತ್ತಾಳೆ. ಇದನ್ನೇ ತನ್ನ ಸ್ವಾರ್ಥಕ್ಕಾಗಿ ಬಳಸುವ ಅರ್ಜುನ್ ಅವಳನ್ನೇ ಒಪ್ಪಂದದ ಮದ್ವೆಯಾಗಿ ಮನೆಗೆ ಕರೆತಂದಿದ್ದಾನೆ. ಹೀಗೆ ಸುಳ್ಳಿನ ಸುಳಿಯಲ್ಲಿ ಬಂಧಿಯಾಗಿರೋ ಈ ಜೋಡಿ ಮೇಲೆ ಮನೆಯವರ ಸಂಶಯ ಹೆಚ್ಚಾಗಿದೆ. ಮನೆಯವರ ವಿಶ್ವಾಸ ಗಳಿಸಲು ತಾನೇ ಸೇವಂತಿಯನ್ನುಅನಾಥಾಶ್ರಮಕ್ಕೆ ಕರೆದುಕೊಂಡು ಬಂದು, ಅಲ್ಲೇ ಗಣಪತಿ ಹಬ್ಬ ಆಚರಿಸುತ್ತಾನೆ. ಆದರೆ, ಇವೆಲ್ಲವನ್ನುಸಹಿಸದ ಪ್ರಿಯಾ ಇಲ್ಲೂ ತನ್ನ ಕುತಂತ್ರ ಬುದ್ಧಿ ತೋರಿಸುತ್ತಾಳೆ.ಒಂದಷ್ಟು ಡಾನ್ಸ್, ಆಟಗಳು ಎಲ್ಲವೂ ಸೇರಿ ಸೆಪ್ಟೆಂಬರ್‌3 ಮತ್ತು 4 ರಂದು ಫುಲ್ ಪ್ಯಾಕ್ ಎಂಟರ್‌ಟೈನ್‌ಮೆಂಟ್‌ ನೀಡಲು ಸೇವಂತಿ ತಂಡವು ಸಜ್ಜಾಗಿದೆ.

ಕ್ಷಮಾದಲ್ಲಿ ಗಣೇಶೋತ್ಸವ

ಕ್ಷಮಾ ಧಾರಾವಾಹಿಯಲ್ಲಿ, ಗಂಡ ಇಲ್ಲದಿದ್ದರೂ ಒಂಟಿಯಾಗಿ ಯಾರ ಮುಂದೆಯೂ ತಲೆ ಬಾಗದ, ಕೈ ಚಾಚದ ಕ್ಷಮಾ ತನ್ನ ಸಂಸಾರವನ್ನು ಪ್ರಾಮಾಣಿಕವಾಗಿ ನಡೆಸುತ್ತಿರುವ ಹೆಣ್ಣು ಮಗಳು. ಕ್ಷಮಾ ಮಗಳಾದ ಜಾಹ್ನವಿ ತನ್ನ ತಂದೆಯನ್ನು ಹುಡುಕುವ ಭರದಲ್ಲಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಾಗ,ಕ್ಷಮಾ ದಿಟ್ಟತನದಿಂದ ಹೋರಾಡಿ ಅವಳನ್ನು ಕಾಪಾಡುತ್ತಾಳೆ. ಇದೇ ಕಾರಣಕ್ಕೆ ಗಣಪತಿ ಬಪ್ಪನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಕ್ಷಮಾನಿರ್ಧರಿಸುತ್ತಾಳೆ.

ಹಬ್ಬಕ್ಕೆ ತನ್ನ ಹಿತೈಷಿಗಳಾದ ರವಿಕಾಂತ್‌ನನ್ನೂ ಕರೆಯುತ್ತಾಳೆ. ಆದರೆ ರವಿಕಾಂತ್ ಹೇಗಾದರೂ ಈಕೆಯನ್ನು ವಶ ಮಾಡಿಕೊಳ್ಳಬೇಕೆಂದಿರುವ ದುಷ್ಟ. ಇಂತಹವರಿಂದ ಕ್ಷಮಾ ತನ್ನನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ? ಎಂಬುದೇ ಮುಂದಿನ ಕಥಾಹಂದರ. ಗಣಪತಿ ಅರ್ಚನೆಯಿಂದ ಕ್ಷಮಾಳ ಬದುಕಲ್ಲಿರುವ ವಿಘ್ನಗಳೆಲ್ಲ ಪರಿಹಾರವಾಗಿ ಅವಳ ಜೀವನ ಸುಖಮಯವಾಗುತ್ತಾ? ಅವಳ ಹೋರಾಟದ ಬದುಕಿಗೆ ನ್ಯಾಯ ಸಿಗತ್ತಾ? ಈ ಕುತೂಹಲ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿರುವಕ್ಷಮಾದಲ್ಲಿನ ಗಣೇಶೋತ್ಸವ ಸಂಚಿಕೆಯಲ್ಲಿ ತಣಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT