ಶನಿವಾರ, ಮೇ 28, 2022
21 °C

ಬರ್ತ್‌ ಡೇ ಪಾರ್ಟಿಗೆ ಕಿಕ್‌ ಕೊಟ್ಟ ಸಲ್ಮಾನ್‌ ಖಾನ್‌, ಜೆನಿಲಿಯಾ ನೃತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ನಟ ಮತ್ತು ಉದ್ಯಮಿ ಸಲ್ಮಾನ್ ಖಾನ್ ಡಿಸೆಂಬರ್‌ 27ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅದೇ ದಿನ ರಾತ್ರಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು.

ಸೋಮವಾರ ರಾತ್ರಿ ಈ ಪಾರ್ಟಿ ನಡೆದಿದ್ದು ಸಿನಿಮಾರಂಗದ ಗಣ್ಯರು ಭಾಗವಹಿಸಿದ್ದರು. ಪಾರ್ಟಿಯಲ್ಲಿ ಸಲ್ಮಾನ್‌ ಖಾನ್‌ ಹಾಗೂ ನಟಿ ಜೆನಿಲಿಯಾ ಭರ್ಜರಿ ಡ್ಯಾನ್ಸ್‌ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಪಾಶ್ಚಿಮಾತ್ಯ ಶೈಲಿಯ ಹಾಡಿಗೆ ಇಬ್ಬರು ಭರ್ಜರಿ ಸ್ಟೆಪ್‌ ಹಾಕಿದ್ದಾರೆ. 57ರ ಹರೆಯದಲ್ಲೂ ಸಲ್ಲೂ ಬಾಯ್‌ ಎಂಜಾಯ್‌ ಮಾಡುತ್ತ ನೃತ್ಯ ಮಾಡಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಶನಿವಾರ ರಾತ್ರಿ ಅವರಿಗೆ ಹಾವು ಕಚ್ಚಿತ್ತು. ಸಲ್ಲೂ ಬಾಯ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಸೋಮವಾರ ಜನ್ಮದಿನ ಆಚರಿಸಿಕೊಂಡ ಅವರಿಗೆ ಅಭಿಮಾನಿಗಳು ಹಾಗೂ ಸಿನಿಮಾರಂಗದ ಗಣ್ಯರು ಜನ್ಮದಿನದ ಶುಭಾಶಯ ಕೋರಿದ್ದರು.

ನಟ, ನಿರ್ಮಾಪಕ, ಟಿವಿ ಕಾರ್ಯಕ್ರಮ ನಿರೂಪಕ ಮತ್ತು ಉದ್ಯಮಿ ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಲ್ಮಾನ್ ಖಾನ್, 1965ರ ಡಿಸೆಂಬರ್ 27ರಂದು ಮಧ್ಯ ಪ್ರದೇಶದ ಇಂಧೋರ್‌ನಲ್ಲಿ ಜನಿಸಿದರು.

1988ರಿಂದ ಸಲ್ಮಾನ್ ಖಾನ್, ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವಿವಾಹಿತರಾಗಿರುವ ಅವರು, ಹಲವು ನಟಿಯರ ಜತೆ ಡೇಟಿಂಗ್ ಮೂಲಕವೂ ಸುದ್ದಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು